ADVERTISEMENT

ರಷ್ಯಾಗೆ ಶಸ್ತ್ರಾಸ್ತ್ರ ಪೂರೈಕೆ: ಚೀನಾ ಕಂಪನಿಗಳ ಮೇಲೆ ನಿರ್ಬಂಧಕ್ಕೆ ಚಿಂತನೆ

ರಾಯಿಟರ್ಸ್
Published 8 ಮೇ 2023, 19:31 IST
Last Updated 8 ಮೇ 2023, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬ್ರಸೆಲ್ಸ್: ರಷ್ಯಾ – ಉಕ್ರೇನ್‌ ಯುದ್ಧದಲ್ಲಿ ಬಳಸುವ ಶಸ್ತ್ರಾಸ್ತ್ರ ಪರಿಕರಗಳ ಪೂರೈಕೆಗೆ ಸಂಬಂಧಿಸಿದಂತೆ ಚೀನಾದ ಕೆಲವು ಕಂಪನಿಗಳ ಮೇಲೆ ನಿರ್ಬಂಧವನ್ನು ಹೇರಲು ಐರೋಪ್ಯ ರಾಷ್ಟ್ರಗಳ ಒಕ್ಕೂಟವು (ಇಯು) ಚಿಂತನೆ ನಡೆಸಿದೆ.

ಒಕ್ಕೂಟದ ಸದಸ್ಯ ರಾಷ್ಟ್ರಗಳ ಈ ವಾರದ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ಏಳು ಉದ್ಯಮಗಳ ಪಟ್ಟಿ ಸಿದ್ಧವಾಗಿದೆ ಎಂದು ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ.

ವರದಿ ಪ್ರಕಾರ, ಚೀನಾದ ಎರಡು ಪ್ರಮುಖ ಸಂಸ್ಥೆಗಳು, 3ಎಚ್‌ಸಿ ಸೆಮಿ ಕಂಡಕ್ಟರ್‌ಗಳು, ಕಿಂಗ್ ಪೈ ಟೆಕ್ನಾಲಜಿ, ಹಾಂಗ್‌ಕಾಂಗ್‌ನ ಸಿನ್ನೊ ಎಲೆಕ್ಟ್ರಾನಿಕ್ಸ್, ಸಿಗ್ಮಾ ಟೆಕ್ನಾಲಜಿ, ಏಷ್ಯಾ ಪ್ಯಾಸಿಫಿಕ್ ಲಿಂಕ್ಸ್, ಟೊರ್ಡಾನ್ ಇಂಡಸ್ಟ್ರಿ, ಆಲ್ಫಾ ಟ್ರೇಡಿಂಗ್ ಇನ್‌ವೆಸ್ಟ್‌ಮೆಂಟ್‌ ಸೇರಿವೆ.

ADVERTISEMENT

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್‌ ವೆನ್‌ಬಿನ್‌ ಅವರು, ‘ತಪ್ಪು ನಿರ್ಧಾರ ಕೈಗೊಳ್ಳಬಾರದು. ಒಂದು ವೇಳೆ ಕೈಗೊಂಡರೆ ಚೀನಾ ಕೂಡಾ ತನ್ನ ಹಕ್ಕು ಮತ್ತು ಹಿತಾಸಕ್ತಿಗಳ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ’ ಎಂದು ಎಚ್ಚರಿಸಿದ್ದರು.

ಯೂರೋಪಿಯನ್‌ ಕಮಿಷನ್‌ ಈ ಬಗ್ಗೆ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.