ಇಸ್ಲಾಮಾಬಾದ್: ಇಸ್ಲಾಮಿಕ್ ಅಲ್ಲದ ಮದುವೆ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿಯನ್ನು ಕೋರ್ಟ್ ಖುಲಾಸೆಗೊಳಿಸಿದೆ.
ಆದರೆ, ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ಪೊಲೀಸರು ಅವರು ಬಂಧಿಸಿದ ಕಾರಣ, ಬಿಡುಗಡೆಯಾಗುವ ಅವರ ನಿರೀಕ್ಷೆ ಹುಸಿಯಾಯಿತು.
ಸ್ಥಳೀಯ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್, ಇದ್ದತ್ ಪ್ರಕರಣದಲ್ಲಿ ತಮಗೆ ವಿಧಿಸಿದ್ದ ಶಿಕ್ಷೆ ಕುರಿತಂತೆ 71 ವರ್ಷ ವಯಸ್ಸಿನ ಇಮ್ರಾನ್ ಖಾನ್ ಮತ್ತು 49 ವರ್ಷ ವಯಸ್ಸಿನ ಬುಶಾರಾ ಬೀಬಿ ಅವರ ಮನವಿಯನ್ನು ಪುರಸ್ಕರಿಸಿತು. ಖುಲಾಸೆಗೊಳ್ಳುವ ಮೂಲಕ ಇಮ್ರಾನ್ ಖಾನ್ ಅವರ ವಿರುದ್ಧ ಇದ್ದ ಕೊನೆಯ ಕಾನೂನು ಪ್ರಕರಣವೊಂದು ಇತ್ಯರ್ಥಗೊಂಡಂತಾಗಿದೆ.
ಕೋರ್ಟ್ ಆದೇಶದ ಬಳಿಕ ಹಿಂದೆಯೇ ಭ್ರಷ್ಟಾಚಾರದ ಪ್ರಕರಣದಲ್ಲಿ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ದಳ (ಎನ್‌ಎಬಿ) ಇಮ್ರಾನ್ ಖಾನ್ ಅವರನ್ನು ಬಂದಿಸಿತು. ದಂಪತಿಯನ್ನು ಬಂಧಿಸಿರುವುದನ್ನು ಎನ್‌ಎಬಿ ನಿರ್ದೇಶಕ ಮೊಹಸೀನ್ ಹಾರೂನ್ ದೃಢಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.