ADVERTISEMENT

ಫೇಸ್‌ಬುಕ್‌: ಸಾವಿರಾರು ಆ್ಯಪ್‌ ರದ್ದು

ಬಳಕೆದಾರರ ಮಾಹಿತಿ ಸೋರಿಕೆಯಾಗದಂತೆ ತಡೆಯಲು ಕ್ರಮ

ಏಜೆನ್ಸೀಸ್
Published 21 ಸೆಪ್ಟೆಂಬರ್ 2019, 19:43 IST
Last Updated 21 ಸೆಪ್ಟೆಂಬರ್ 2019, 19:43 IST
s
s   

ಸ್ಯಾನ್‌ಫ್ರಾನ್ಸಿಸ್ಕೊ:ಫೇಸ್‌ಬುಕ್‌ ವೇದಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಾವಿರಾರು ಆ್ಯಪ್‌ಗಳನ್ನುಸ್ಥಗಿತಗೊಳಿಸಲಾಗಿದೆ.

ಕೇಂಬ್ರಿಡ್ಜ್ ಅನಾಲಿಟಿಕಾ ಹಗರಣದ ಬಳಿಕ ಬಳಕೆದಾರರ ಮಾಹಿತಿ ಸೋರಿಕೆಯಾಗದಂತೆ ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಫೇಸ್‌ಬುಕ್‌ ತಿಳಿಸಿದೆ.

ಸ್ಥಗಿತಗೊಳಿಸಿರುವ ಆ್ಯಪ್‌ಗಳು ಜನರಿಗೆ ಅಪಾಯ ಮಾಡುತ್ತಿವೆಎಂದರ್ಥವಲ್ಲ. ಮಾಹಿತಿ ನೀಡುವಂತೆ ನಮ್ಮ ಕೋರಿಕೆಗೆ ಸ್ಪಂದಿಸದ ಆ್ಯಪ್‌ಗಳನ್ನು ಸ್ಥಗಿತಗೊಳಿಸಲಾಗಿದೆ. ಈ ಆ್ಯಪ್‌ಗಳ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ತಿಳಿಸಿದೆ.

ADVERTISEMENT

‘ಆ್ಯಪ್‌ಗಳು ಮಾಹಿತಿಗಳನ್ನು ಹೇಗೆ ಬಳಸುತ್ತಿವೆ ಮತ್ತು ಗೋಪ್ಯತೆಯ ನಿಯಮಗಳನ್ನು ಗೌರವಿಸುತ್ತಿವೆಯೇ ಎಂದು ಪರಿಶೀಲನೆ ನಡೆಸಲಾಗುವುದು’ ಎಂದುಫೇಸ್‌ಬುಕ್‌ ಉಪಾಧ್ಯಕ್ಷ ಐಮೆ ಆರ್ಚಿಬಾಂಗ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.