ADVERTISEMENT

ವಿದೇಶಾಂಗ ಕಾರ್ಯದರ್ಶಿ ಗೋಖಲೆ ಚೀನಾ ಭೇಟಿ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2019, 20:19 IST
Last Updated 20 ಏಪ್ರಿಲ್ 2019, 20:19 IST
ವಾಂಗ್ ಯಿ, ಗೋಖಲೆ
ವಾಂಗ್ ಯಿ, ಗೋಖಲೆ   

ಬೀಜಿಂಗ್: ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಭಾನುವಾರದಿಂದ ಎರಡು ದಿನ ಚೀನಾ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಜತೆ ಮಾತುಕತೆ ನಡೆಸಲಿದ್ದಾರೆ.

ಮಸೂದ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ವಿಶ್ವಸಂಸ್ಥೆಯ ನಿರ್ಣಯಕ್ಕೆ ಚೀನಾ ತಾಂತ್ರಿಕ ತಡೆ ಒಡ್ಡುತ್ತಿರುವುದು, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮಾರ್ಗವಾಗಿ ಚೀನಾ- ಪಾಕಿಸ್ತಾನ ಆರ್ಥಿಕ ಕಾರಿಡಾರ್ ನಿರ್ಮಾಣ ಮಾಡುತ್ತಿರುವುದು ಸೇರಿದಂತೆ ಭಾರತ– ಚೀನಾ ನಡುವೆ ಹಲವು ಬಿಕ್ಕಟ್ಟುಗಳಿವೆ.

ಗೋಖಲೆ ಅವರ ಈ ಪ್ರವಾಸ ಸಾಮಾನ್ಯ ಭೇಟಿ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ADVERTISEMENT

ಚೀನಾ ತನ್ನ ‘ಒಂದು ವಲಯ ಒಂದು ರಸ್ತೆ’ ಯೋಜನೆಯ ಸಂಬಂಧ ‘ವಲಯ ಮತ್ತು ರಸ್ತೆ ವೇದಿಕೆ(ಬಿಆರ್‌ಎಫ್)’ಯ ಎರಡನೇ ಅಂತರರಾಷ್ಟ್ರೀಯ ಸಭೆ ಸಮೀಪಿಸುತ್ತಿರುವಸಂದರ್ಭದಲ್ಲಿಯೇ ಗೋಖಲೆ ಅವರು ಈ ಪ್ರವಾಸ ಕೈಗೊಳ್ಳುತ್ತಿದ್ದಾರೆ.

ಆದರೆ, ಇದೇ 25ರಿಂದ 27ರವರೆಗೆ ನಡೆಯಲಿರುವಬಿಆರ್‌ಎಫ್ ಸಭೆ ಬಹಿಷ್ಕರಿಸುವುದಾಗಿ ಭಾರತ ಈಗಾಗಲೇ ಘೋಷಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.