ADVERTISEMENT

ದೀಪಾವಳಿಯ ಶುಭಾಶಯ ಕೋರಿದ ಪ್ರಮುಖ ಜಾಗತಿಕ ನಾಯಕರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ನವೆಂಬರ್ 2020, 4:57 IST
Last Updated 15 ನವೆಂಬರ್ 2020, 4:57 IST
ಕುಟುಂಬದೊಂದಿಗೆ ಜೋ ಬೈಡನ್‌
ಕುಟುಂಬದೊಂದಿಗೆ ಜೋ ಬೈಡನ್‌   

ವಾಷಿಂಗ್ಟನ್‌: ಅಮೆರಿಕದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವ ಜೋ ಬೈಡನ್‌, ಉಪಾಧ್ಯಕ್ಷೆಯಾಗಿ ಆಯ್ಕೆ ಆಗಿರುವ ಕಮಲಾ ಹ್ಯಾರಿಸ್‌ ಸೇರಿದಂತೆ ವಿಶ್ವದ ಹಲವು ಪ್ರಮುಖ ನಾಯಕರು ಟ್ವೀಟ್‌ ಮೂಲಕ ದೀಪಾವಳಿಯ ಶುಭಾಶಯ ಕೋರಿದ್ದಾರೆ.

ದೀಪಾವಳಿಯ ಶುಭಾಶಯ ಕೋರಿ ಶನಿವಾರ ಟ್ವೀಟ್‌ ಮಾಡಿರುವ ಜೋ ಬೈಡನ್‌, 'ದೀಪಾವಳಿ ಆಚರಿಸುತ್ತಿರುವ ಲಕ್ಷಾಂತರ ಹಿಂದೂಗಳು, ಜೈನರು, ಸಿಖ್ಖರು ಮತ್ತು ಬೌದ್ಧರಿಗೆ ನಾನು ಮತ್ತು ನನ್ನ ಪತ್ನಿ ಜಿಲ್‌ ಬೈಡನ್‌ ಶುಭಾಶಯ ಕೋರುತ್ತೇವೆ. ನಿಮ್ಮೆಲ್ಲರ ಮುಂದಿನ ವರ್ಷವು ಭರವಸೆ, ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರಲಿ' ಎಂದು ತಿಳಿಸಿದ್ದಾರೆ.

ಅಮೆರಿಕದ ಉಪಾಧ್ಯಕ್ಷೆಯಾಗಿ ಚುನಾಯಿತರಾಗಿರುವ ಕಮಲಾ ಹ್ಯಾರಿಸ್‌, 'ನಾನು ಮತ್ತು ನನ್ನ ಪತಿಯಿಂದ ನಿಮ್ಮೆಲ್ಲರಿಗೂ ದೀಪಾವಳಿಯ ಶುಭಾಶಯಗಳು. ಸುರಕ್ಷಿತ, ಆರೋಗ್ಯಕರ ಮತ್ತು ಸಂತೋಷದಾಯಕ ಹೊಸ ವರ್ಷ ನಿಮ್ಮದಾಗಲೆಂದು ನಾವು ಕೋರುತ್ತೇವೆ' ಎಂದು ಟ್ವೀಟ್‌ ಮಾಡಿದ್ದಾರೆ.

ADVERTISEMENT

ಅಮೆರಿಕದ ಈಗಿನ ಅಧ್ಯಕ್ಷರಾಗಿರುವ ಡೊನಾಲ್ಡ್‌ ಟ್ರಂಪ್‌ ಅವರು ವೈಟ್‌ ಹೌಸ್‌ನಲ್ಲಿ ದೀಪವನ್ನು ಹೊತ್ತಿಸುತ್ತಿರುವ ಚಿತ್ರವೊಂದನ್ನು ಹಂಚಿಕೊಳ್ಳುವ ಮೂಲಕ ದೀಪಾವಳಿಯ ಶುಭಾಶಯ ಕೋರಿದ್ದಾರೆ.

ದೀಪಾವಳಿಯ ಶುಭಾಶಯ ಕೋರುವ ಮೂಲಕ ಸುರಕ್ಷತವಾಗಿರಿ ಎಂದು ಜನರಿಗೆ ವಿನಂತಿಸುವ ಮೂಲಕ ಇಂಗ್ಲೆಂಡ್‌ ಪ್ರಧಾನಿ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.