ADVERTISEMENT

ಭಾರತ ಮೂಲದ ಕಂಪನಿಯ ಸಿರಪ್‌ ಸೇವಿಸಿ ದೇಶದಲ್ಲಿ 70 ಮಕ್ಕಳು ಸಾವು: ಗಾಂಬಿಯಾ ಸರ್ಕಾರ

ರಾಯಿಟರ್ಸ್
Published 15 ಅಕ್ಟೋಬರ್ 2022, 6:43 IST
Last Updated 15 ಅಕ್ಟೋಬರ್ 2022, 6:43 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬಂಜುಲ್‌ (ಗಾಂಬಿಯಾ):ಭಾರತದ ಔಷಧ ತಯಾರಿಕ ಕಂಪನಿಯಕೆಮ್ಮು ಮತ್ತು ಶೀತ ಸಿರಪ್‌ ಸೇವನೆಯಿಂದ ಉಲ್ಬಣಿಸಿದ ಮೂತ್ರಪಿಂಡ ಸಮಸ್ಯೆಯಿಂದಾಗಿ ಮೃತಪಟ್ಟ ಮಕ್ಕಳ ಸಂಖ್ಯೆ 70ಕ್ಕೆ ಏರಿಕೆಯಾಗಿದೆ ಎಂದು ಗಾಂಬಿಯಾ ಸರ್ಕಾರ ಶುಕ್ರವಾರ ತಿಳಿಸಿದೆ.

ಪಶ್ಚಿಮ ಆಫ್ರಿಕಾದ ರಾಷ್ಟ್ರವಾಗಿರುವ ಗಾಂಬಿಯಾದ ಅಧ್ಯಕ್ಷ ಅದಮಬ್ಯಾರೋ, ಸಚಿವ ಸಂಪುಟದ ತುರ್ತು ಸಭೆಯಲ್ಲಿ ಈ ಮಾಹಿತಿ ನೀಡಿದ್ದಾರೆ.

ಈ ಸಿರಪ್‌ ಅನ್ನುದೆಹಲಿ ಮೂಲದಮೈಡನ್ ಫಾರ್ಮಾಸ್ಯುಟಿಕಲ್ಸ್‌ ಲಿಮಿಟೆಡ್‌ತಯಾರಿಸಿದೆ ಎಂದು ತಿಳಿದುಬಂದಿದೆ. ಉತ್ತರ ಭಾರತದಲ್ಲಿ ಕಂಪೆನಿಯ ಒಂದು ಕೇಂದ್ರವನ್ನು ಮುಚ್ಚಲಾಗಿದೆ.ಈ ಬಗ್ಗೆ ಆರೋಗ್ಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ADVERTISEMENT

ಸಾವಿನ ಬಗ್ಗೆ ಗಾಂಬಿಯಾ ಸರ್ಕಾರವೂ ತನಿಖೆ ನಡೆಸುತ್ತಿದೆ.

ಸಿರಪ್‌ಗಳನ್ನು ಹಿಂಪಡೆಯಲುಗಾಂಬಿಯಾದಲ್ಲಿ ಅಭಿಯಾನ ಪ್ರಾರಂಭವಾಗಿದೆ.ಆರೋಗ್ಯ ಸಚಿವಾಲಯವು ಅಲ್ಲಿನ ರೆಡ್‌ ಕ್ರಾಸ್‌ ಸೊಸೈಟಿಯ ಸಹಯೋಗದಲ್ಲಿ ನೂರಾರು ಯುವಕರ ತಂಡಗಳನ್ನು ರಚಿಸಿ,ಮನೆ ಮನೆಗೆ ತೆರಳಿ, ಕೆಮ್ಮಿನ ಸಿರಪ್‌ನ ಸೀಸೆಗಳನ್ನು ಸಂಗ್ರಹಿಸುತ್ತಿದೆ.

‘ಭಾರತದ ಕಂಪನಿಯೊಂದು ತಯಾರಿಸಿರುವ ನಾಲ್ಕು ಕಲುಷಿತ ಕಫ್‌ ಸಿರಪ್‌ಗಳನ್ನು (ಕೆಮ್ಮು ನಿವಾರಕ) ಸೇವಿಸಿ ಪಶ್ಚಿಮ ಆಫ್ರಿಕಾದಲ್ಲಿನ ಗಾಂಬಿಯಾ ದೇಶದ 65ಕ್ಕೂ ಹೆಚ್ಚುಮಕ್ಕಳು ಸಾವಿಗೀಡಾಗಿದ್ದಾರೆ’ ಎಂದು ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಅ.12 ರಂದು (ಬುಧವಾರ) ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.