ADVERTISEMENT

ಗಾಜಾ: ವೈಮಾನಿಕ ದಾಳಿ, 94 ಮಂದಿ ಸಾವು

ಏಜೆನ್ಸೀಸ್
Published 3 ಜುಲೈ 2025, 13:00 IST
Last Updated 3 ಜುಲೈ 2025, 13:00 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಟೆಲ್‌ ಅವೀವ್‌: ಗಾಜಾದಲ್ಲಿ ತಡರಾತ್ರಿ ನಡೆದ ವೈಮಾನಿಕ ಮತ್ತು ಗುಂಡಿನ ದಾಳಿಯಲ್ಲಿ ಮಾನವೀಯ ನೆರವಿಗಾಗಿ ಕಾಯುತ್ತಿದ್ದ 45 ಜನರು ಸೇರಿದಂತೆ 94 ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.

ADVERTISEMENT

ಗಾಜಾದ ಜನರಿಗೆ ಆಹಾರ ಸೇರಿದಂತೆ ಹಲವು ರೀತಿಯ ಮಾನವೀಯ ನೆರವು ನೀಡುತ್ತಿದ್ದ ಅಮೆರಿಕದ ‘ಗಾಜಾ ಹ್ಯುಮ್ಯಾನಿಟೇರಿಯನ್ ಫೌಂಡೇಶನ್‌’ಗೆ ಸೇರಿದ ಸ್ಥಳಗಳಲ್ಲಿ ಐವರು ಮೃತಪಟ್ಟಿದ್ದಾರೆ. ನೆರವು ಸಾಮಗ್ರಿಗಳಿದ್ದ ಟ್ರಕ್‌ಗಾಗಿ ಕಾಯುತ್ತಿದ್ದ ಹಲವರು ದಾಳಿಯಲ್ಲಿ ಮೃತಪಟ್ಟಿದ್ದಾರೆ.

ಬುಧವಾರ ರಾತ್ರಿ ಮತ್ತು ಗುರುವಾರ ಬೆಳಿಗ್ಗೆ ವೈಮಾನಿಕ ದಾಳಿಗಳು ನಡೆದಿರುವುದು ಸಾವಿನ ಸಂಖ್ಯೆ ಹೆಚ್ಚಲು ಕಾರಣವಾಗಿದೆ.

ದಾಳಿಯ ಕುರಿತು ಇಸ್ರೇಲ್‌ ಯಾವುದೇ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.