

ಸ್ಯಾನ್ ಫ್ರಾನ್ಸಿಸ್ಕೊ: ಆರೋಗ್ಯ ಸೇವೆಯನ್ನು ಆಧುನೀಕರಣಗೊಳಿಸುವ ಉದ್ದೇಶದಿಂದ ಗೂಗಲ್ ಆರಂಭಿಸಿರುವ ‘ನೈಟಿಂಗೇಲ್’ ಯೋಜನೆ, ಇದೀಗ ತನಿಖೆ ಎದುರಿಸುವಂತಾಗಿದೆ.
ದಾದಿಯಾಗಿ ಸೇವೆ ಸಲ್ಲಿಸುವುದನ್ನು ಒಂದು ವೃತ್ತಿಯಾಗಿ ಬದಲಾಯಿಸಿದ ಫ್ಲಾರೆನ್ಸ್ ನೈಟಿಂಗೇಲ್ ಅವರ ಸ್ಮರಣಾರ್ಥ, ಈ ಯೋಜನೆಯನ್ನು ಜಾರಿಗೊಳಿಸುತ್ತಿರುವುದಾಗಿ ಗೂಗಲ್ ಮಂಗಳವಾರ ಘೋಷಿಸಿತ್ತು.
ಯೋಜನೆಯಡಿ ಗೂಗಲ್ ಹಾಗೂ ಅಸೆನ್ಷನ್ ಹೆಲ್ತ್ ಸಂಸ್ಥೆ ಒಪ್ಪಂದ ಮಾಡಿಕೊಂಡಿದ್ದು, ಅಮೆರಿಕದ ಲಕ್ಷಾಂತರ ಜನರ ಖಾಸಗಿ ಆರೋಗ್ಯ ಮಾಹಿತಿಯನ್ನು ಸಂಗ್ರಹಿಸಲಿದೆ. ಈ ಘೋಷಣೆಬೆನ್ನಲ್ಲೇ, ನಿಯಮಗಳನ್ನು ಗೂಗಲ್ ಸಂಸ್ಥೆ ಸೂಕ್ತವಾಗಿ ಪಾಲಿಸುತ್ತಿದೆಯೇ ಎನ್ನುವುದನ್ನು ತನಿಖೆ ನಡೆಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.