ADVERTISEMENT

ಜನಾಂಗೀಯ ದ್ವೇಷದ ವಿರುದ್ಧ ಹೋರಾಟಕ್ಕೆ ಗೂಗಲ್‌ ಸಾಥ್‌: ₹279 ಕೋಟಿ ನೆರವು

ಪಿಟಿಐ
Published 4 ಜೂನ್ 2020, 19:30 IST
Last Updated 4 ಜೂನ್ 2020, 19:30 IST
 ಸುಂದರ್‌ ಪಿಚೈ
ಸುಂದರ್‌ ಪಿಚೈ   

ವಾಷಿಂಗ್ಟನ್‌: ಅಮೆರಿಕದಲ್ಲಿ ಜನಾಂಗೀಯ ದ್ವೇಷದ ವಿರುದ್ಧದ ಹೋರಾಟಕ್ಕೆ ₹ 279 ಕೋಟಿ (37 ದಶಲಕ್ಷ ಡಾಲರ್‌) ನೆರವು ನೀಡುವುದಾಗಿಮಾಹಿತಿ ತಂತ್ರಜ್ಞಾನ ಕ್ಷೇತ್ರದ ದೈತ್ಯ ಸಂಸ್ಥೆ ಗೂಗಲ್‌ನ ಸಿಇಒ ಸುಂದರ್‌ ಪಿಚೈ ಘೋಷಿಸಿದ್ದಾರೆ.

ಪೊಲೀಸ್‌ ವಶದಲ್ಲಿದ್ದ ಆಫ್ರಿಕಾ ಮೂಲದ ಅಮೆರಿಕ ಪ್ರಜೆ ಜಾರ್ಜ್‌ ಫ್ಲಾಯ್ಡ್‌ ಅವರ ಹತ್ಯೆ ಖಂಡಿಸಿ ದೇಶದಾದ್ಯಂತ ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಪಿಚೈ ಅವರಿಂದ ಈ ಘೋಷಣೆ ಹೊರಬಿದ್ದಿದೆ.

ಈ ಸಂಬಂಧ ಸಂಸ್ಥೆಯ ಉದ್ಯೋಗಿಗಳಿಗೆ ಬುಧವಾರ ಇ–ಮೇಲ್‌ವೊಂದನ್ನು ಕಳಿಸಿದ್ದ ಅವರು, ‘ಆಫ್ರಿಕಾ ಮೂಲದವರ ನೆನಪಿಗಾಗಿ ಎಲ್ಲರೂ 8 ನಿಮಿಷ 46 ಸೆಕಂಡ್‌ಗಳ ಕಾಲ ಮೌನವಾಗಿ ನಿಂತು ಗೌರವ ಸಲ್ಲಿಸಿ’ ಎಂದು ಸೂಚಿಸಿದ್ದಾರೆ.

ADVERTISEMENT

‘₹ 279 ಕೋಟಿ ಪೈಕಿ ಜನಾಂಗೀಯ ದ್ವೇಷದ ವಿರುದ್ಧ ಹೋರಾಡುತ್ತಿರುವ ಸಂಘಟನೆಗಳಿಗೆ ₹ 91 ಕೋಟಿ (12 ದಶಲಕ್ಷ ಡಾಲರ್‌) ಹಾಗೂ ಇಂತಹ ಸಂಘಟನೆಗಳಿಗೆ ನೆರವು, ಮಾರ್ಗದರ್ಶನ ನೀಡುತ್ತಿರುವ ಆ್ಯಡ್‌ ಗ್ರ್ಯಾಂಟ್ಸ್‌ ಎಂಬ ಸಂಸ್ಥೆಗೆ ₹ 188 ಕೋಟಿ (25 ದಶಲಕ್ಷ ಡಾಲರ್‌) ನೀಡುವುದಾಗಿ’ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.