ADVERTISEMENT

ಗ್ರೀನ್‌ಲ್ಯಾಂಡ್ ವಶಕ್ಕೆ ಪಡೆಯುವ ನಿರ್ಧಾರ ಬೆಂಬಲಿಸದ ದೇಶಗಳಿಗೆ ತೆರಿಗೆ ಬಿಸಿ

ಪಿಟಿಐ
Published 18 ಜನವರಿ 2026, 4:34 IST
Last Updated 18 ಜನವರಿ 2026, 4:34 IST
<div class="paragraphs"><p>ಡೊನಾಲ್ಡ್ ಟ್ರಂಪ್</p></div>

ಡೊನಾಲ್ಡ್ ಟ್ರಂಪ್

   

ಪಾಮ್‌ ಬೀಚ್‌: ಗ್ರೀನ್‌ಲ್ಯಾಂಡ್‌ ಅನ್ನು ವಶಕ್ಕೆ ಪಡೆಯುವ ತಮ್ಮ ನಿರ್ಧಾರಕ್ಕೆ ಬೆಂಬಲ ನೀಡದ ಯೂರೋಪಿನ ಕೆಲವು ರಾಷ್ಟ್ರಗಳ ಮೇಲೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶೇ 10ರಷ್ಟು ಹೆಚ್ಚುವರಿ ಸುಂಕ ವಿಧಿಸಿದ್ದಾರೆ. ಈಗಾಗಲೇ ಈ ದೇಶಗಳ ಮೇಲೆ ಅಮೆರಿಕ ಶೇ 15ರಷ್ಟು ತೆರಿಗೆ ವಿಧಿಸಿದ್ದು, ಹೆಚ್ಚುವರಿ ತೆರಿಗೆ ಮೂಲಕ ಈ ದರವು ಶೇ 25ಕ್ಕೆ ಏರಿಕೆಯಾಗಲಿದೆ.

ಫೆಬ್ರುವರಿ 1ರಿಂದ ಹೊಸ ತೆರಿಗೆ ದರ ಜಾರಿಗೆ ಬರಲಿದೆ. ‘ಗ್ರೀನ್‌ಲ್ಯಾಂಡ್‌ ಅನ್ನು ಮಾರಾಟ ಮಾಡುವ ವಿಚಾರವಾಗಿ ‌ಈ ರಾಷ್ಟ್ರಗಳು ‘ಮಾತುಕತೆ ಮೇಜಿ’ನ ಬಳಿಗೆ ಬರುವವರೆಗೂ ಹೆಚ್ಚುವರಿ ಸುಂಕ ಜಾರಿಯಲ್ಲಿರಲಿದೆ’ ಎಂದು ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.

ADVERTISEMENT

ಟ್ರಂಪ್‌ ಒತ್ತಡಕ್ಕೆ ಮಣಿಯದೆ, ಡೆನ್ಮಾರ್ಕ್‌ ಬೆಂಬಲಕ್ಕೆ ನಿಂತಿರುವ ನ್ಯಾಟೊ ಸದಸ್ಯರಾದ ನಾರ್ವೆ, ಸ್ವೀಡನ್‌, ಫ್ರಾನ್ಸ್‌, ಜರ್ಮನಿ, ಬ್ರಿಟನ್, ನೆದರ್ಲೆಂಡ್ಸ್, ಫಿನ್ಲೆಂಡ್ ರಾಷ್ಟ್ರಗಳಿಗೆ ತೆರಿಗೆ ಬಿಸಿ ತಟ್ಟಲಿದೆ. ಗ್ರೀನ್‌ಲ್ಯಾಂಡ್‌ ವಿಷಯದಲ್ಲಿ ಈ ರಾಷ್ಟ್ರಗಳು ಪಟ್ಟು ಸಡಿಲಿಸಿದ್ದರೆ ಈಗಿನ ಶೇ 10ರಷ್ಟು ತೆರಿಗೆಯನ್ನು ಜೂನ್‌ 1ರಿಂದ ಶೇ 25ಕ್ಕೆ ಹೆಚ್ಚಿಸಲಾಗುವುದು’ ಎಂದೂ ಟ್ರಂಪ್‌ ಎಚ್ಚರಿಸಿದ್ದಾರೆ. ಇನ್ನು 5  ತಿಂಗಳಲ್ಲಿ ಗ್ರೀನ್‌ಲ್ಯಾಂಡ್‌ನ ಸಂಪೂರ್ಣ ಖರೀದಿಯ ಒಪ್ಪಂದ ಆಗಲೇಬೇಕು ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.