ADVERTISEMENT

ಗ್ರೀನ್‌ಲ್ಯಾಂಡ್ ವಶಪಡಿಸಿಕೊಳ್ಳುವ ಟ್ರಂಪ್ ಯತ್ನಕ್ಕೆ ಡೆನ್ಮಾರ್ಕ್ ವಿರೋಧ

ಪಿಟಿಐ
Published 17 ಜನವರಿ 2026, 14:10 IST
Last Updated 17 ಜನವರಿ 2026, 14:10 IST
<div class="paragraphs"><p>ಗ್ರೀನ್‌ಲ್ಯಾಂಡ್‌ ವಶಪಡಿಸಿಕೊಳ್ಳುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಯತ್ನವನ್ನು ಖಂಡಿಸಿ ಡೆನ್ಮಾರ್ಕ್‌ನ ಕೋಪೆನ್‌ಹೆಗನ್‌ನಲ್ಲಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಜನ&nbsp; &nbsp;ಎಎಫ್‌ಪಿ ಚಿತ್ರ</p></div>

ಗ್ರೀನ್‌ಲ್ಯಾಂಡ್‌ ವಶಪಡಿಸಿಕೊಳ್ಳುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಯತ್ನವನ್ನು ಖಂಡಿಸಿ ಡೆನ್ಮಾರ್ಕ್‌ನ ಕೋಪೆನ್‌ಹೆಗನ್‌ನಲ್ಲಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಜನ   ಎಎಫ್‌ಪಿ ಚಿತ್ರ

   

ಕೋಪೆನ್‌ಹೆಗನ್‌: ಗ್ರೀನ್‌ಲ್ಯಾಂಡ್‌ ಅನ್ನು ವಶಪಡಿಸಿಕೊಳ್ಳುವ ಅಮೆರಿಕ ಅಧ್ಯಕ್ಷ ಟ್ರಂಪ್ ಪ್ರಯತ್ನವನ್ನು ವಿರೋಧಿಸಿ ಸಾವಿರಾರು ಜನರು ಡೆನ್ಮಾರ್ಕ್‌ನ ರಾಜಧಾನಿ ಕೋಪೆನ್‌ಹೆಗನ್‌ನಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಗ್ರೀನ್‌ಲ್ಯಾಂಡ್‌ ಅನ್ನು ವಶಕ್ಕೆ ಪಡೆಯುವ ತನ್ನ ನಿರ್ಧಾರಕ್ಕೆ ಬೆಂಬಲ ನೀಡದ ದೇಶಗಳಿಗೆ ಸುಂಕ ಹೇರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಎಚ್ಚರಿಕೆ ನೀಡಿದ ಬೆನ್ನಲ್ಲೇ ಡೆನ್ಮಾರ್ಕ್‌ ಮತ್ತು ಗ್ರೀನ್‌ಲ್ಯಾಂಡ್‌ನಲ್ಲಿ ಪ್ರತಿಭಟನೆ ಆರಂಭಗೊಂಡಿತು.

ADVERTISEMENT

ಪ್ರತಿಭಟನಕಾರರು ಡೆನ್ಮಾರ್ಕ್‌ ಮತ್ತು ಗ್ರೀನ್‌ಲ್ಯಾಂಡ್‌ ಧ್ವಜ ಹಿಡಿದುಕೊಂಡಿದ್ದರಿಂದ ಕೋಪೆನ್‌ಹೆಗನ್‌ನ ರಸ್ತೆಗಳು ಕೆಂಪು ಮತ್ತು ಬಿಳಿ ಸಮುದ್ರದಂತೆ ಕಾಣುತ್ತಿತ್ತು. ಅಮೆರಿಕ ರಾಯಭಾರ ಕಚೇರಿಯವರೆಗೆ ನಡೆದ ಮೆರವಣಿಗೆಯುದ್ದಕ್ಕೂ ‘ಗ್ರೀನ್‌ಲ್ಯಾಂಡ್‌ ನಮ್ಮದು’ ಎಂಬ ಘೋಷಣೆಗಳು ಮೊಳಗಿದವು.

ಕೋಪೆನ್‌ಹೆಗನ್‌, ಆರ್‌ಹಸ್‌, ಅಲ್‌ಬೋರ್ಗ್‌, ಒಡೆನ್ಸೆ ಮತ್ತು ಗ್ರೀನ್‌ಲ್ಯಾಂಡ್‌ ರಾಜಧಾನಿ ನೂಕ್‌ನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗಿಯಾಗುವ ಬಗ್ಗೆ ಸಾವಿರಾರು ಜನ ಸಾಮಾಜಿಕ ಜಾಲತಾಣದಲ್ಲಿ ಉತ್ಸಾಹ ತೋರಿದ್ದಾರೆ.

‘ಗ್ರೀನ್‌ಲ್ಯಾಂಡ್‌ನ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳನ್ನು ಗೌರವಿಸಿ ಎಂಬ ಸಂದೇಶ ರವಾನಿಸುವುದು ನಮ್ಮ ಉದ್ದೇಶವಾಗಿದೆ’ ಎಂದು ಡೆನ್ಮಾರ್ಕ್‌ನಲ್ಲಿರುವ ಗ್ರೀನ್‌ಲ್ಯಾಂಡ್‌ ಸಂಘಟನೆಯೊಂದು ತಿಳಿಸಿದೆ.

ನೂಕ್‌ನಲ್ಲಿ ಅಮೆರಿಕ ಕಾನ್ಸುಲೆಟ್‌ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಕಾರರು, ಅಮೆರಿಕ ಕಾನೂನುಬಾಹಿರ ಕೃತ್ಯದಲ್ಲಿ ತೊಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಟ್ರಂಪ್‌ ಎಚ್ಚರಿಕೆ: ಕೋಪೆನ್‌ಹೆಗನ್‌ಗೆ ಭೇಟಿ ನೀಡಿದ್ದ ‌ಅಮೆರಿಕದ ಸಂಸದೀಯ ನಿಯೋಗವೊಂದು,‘ಗ್ರೀನ್‌ಲ್ಯಾಂಡ್ ವಶಕ್ಕೆ ಪಡೆಯುವ ತನ್ನ ನಿರ್ಧಾರ ಬೆಂಬಲಿಸದ ರಾಷ್ಟ್ರಗಳ ಮೇಲೆ ಸುಂಕ ಹೇರುವಂತೆ’ ಟ್ರಂಪ್ ನೀಡಿರುವ ಎಚ್ಚರಿಕೆ ಕುರಿತು ಡೆನ್ಮಾರ್ಕ್‌ನ ಸಂಸದರು, ಪ್ರಧಾನಿ ಹಾಗೂ ಗ್ರೀನ್‌ಲ್ಯಾಂಡ್‌ನ ಸಚಿವರಿಗೆ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.