ADVERTISEMENT

ಇಸ್ರೇಲ್: ಗ್ರೇಟಾ ಥನ್‌ಬರ್ಗ್ ಸೇರಿ 171 ಜನರ ಗಡಿಪಾರು

ಏಜೆನ್ಸೀಸ್
Published 6 ಅಕ್ಟೋಬರ್ 2025, 16:02 IST
Last Updated 6 ಅಕ್ಟೋಬರ್ 2025, 16:02 IST
<div class="paragraphs"><p>ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್ (ಎಎಫ್‌ಪಿ ಚಿತ್ರ)</p></div>

ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್ (ಎಎಫ್‌ಪಿ ಚಿತ್ರ)

   

ಜೆರುಸಲೇಂ: ಗಾಜಾಕ್ಕೆ ನೆರವು ಸಾಮಾಗ್ರಿಗಳನ್ನು ತಂದಿದ್ದ ಹಡಗುಗಳಲ್ಲಿದ್ದ ಸ್ವೀಡನ್‌ನ ಹೋರಾಟಗಾರ್ತಿ ಗ್ರೇಟಾ ಥುನ್‌ಬರ್ಗ್‌ ಸೇರಿದಂತೆ 171 ಜನರ ಮತ್ತೊಂದು ತಂಡವನ್ನು ಗ್ರೀಸ್ ಮತ್ತು ಸ್ಲೋವಾಕಿಯಾಕ್ಕೆ ಗಡಿಪಾರು ಮಾಡಲಾಗಿದೆ ಎಂದು ಇಸ್ರೇಲ್ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. 

‘ಗಡಿಪಾರಿಗೆ ಒಳಗಾದವರಲ್ಲಿ ಗ್ರೀಸ್, ಇಟಲಿ, ಫ್ರಾನ್ಸ್‌, ಐರ್ಲೆಂಡ್‌, ಸ್ವೀಡನ್, ಪೋಲೆಂಡ್, ಜರ್ಮನಿ, ಬಲ್ಗೇರಿಯ, ಲಿಥುವೇನಿಯ, ಆಸ್ಟ್ರಿಯ, ಲಕ್ಸಂಬರ್ಗ್, ಫಿನ್‌ಲ್ಯಾಂಡ್, ಡೆನ್ಮಾರ್ಕ್, ಸ್ಲೋವಾಕಿಯ, ಸ್ವಿಜರ್ಲೆಂಡ್, ನಾರ್ವೆ, ಇಂಗ್ಲೆಂಡ್, ಸರ್ಬಿಯ ಮತ್ತು ಅಮೆರಿಕದ ಪ್ರಜೆಗಳು ಇದ್ದಾರೆ’ ಎಂಬ ಮಾಹಿತಿಯೊಂದಿಗೆ ಇಸ್ರೇಲ್‌ನ ವಿದೇಶಾಂಗ ಸಚಿವಾಲಯ ಎಕ್ಸ್‌ನಲ್ಲಿ ಗ್ರೇಟಾ ಸೇರಿದಂತೆ ಇತರ ಹೋರಾಟಗಾರರ ಚಿತ್ರಗಳನ್ನು ಪೋಸ್ಟ್ ಮಾಡಿದೆ.

ADVERTISEMENT

ಕಳೆದ ವಾರ ಟರ್ಕಿ, ಸ್ಪೇನ್ ಮತ್ತು ಇಟಲಿಗೆ ಗಡಿಪಾರಿಗೆ ಒಳಗಾದ ಹೋರಾಟಗಾರರು ಇಸ್ರೇಲ್ ತಮ್ಮೊಂದಿಗೆ ದುರ್ವತನೆ ತೋರಿದೆ ಎಂದು ಸಂರ್ಶನಗಳಲ್ಲಿ ಆರೋಪಿಸಿದ್ದರು, ಇದನ್ನು ಇಸ್ರೇಲ್ ಮತ್ತೊಮ್ಮೆ ನಿರಾಕರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.