ADVERTISEMENT

ಪ್ರತಿಭಟನೆ: ಪರಿಸರ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್ ಪೊಲೀಸ್‌ ವಶಕ್ಕೆ

ಏಜೆನ್ಸೀಸ್
Published 17 ಜನವರಿ 2023, 21:08 IST
Last Updated 17 ಜನವರಿ 2023, 21:08 IST
 ಗ್ರೇಟಾ ಥನ್‌ಬರ್ಗ್ ಅವರನ್ನು ಪೊಲೀಸರು ವಶಕ್ಕೆ ಪಡೆದರು –ಎಪಿ ಚಿತ್ರ
 ಗ್ರೇಟಾ ಥನ್‌ಬರ್ಗ್ ಅವರನ್ನು ಪೊಲೀಸರು ವಶಕ್ಕೆ ಪಡೆದರು –ಎಪಿ ಚಿತ್ರ   

ಬರ್ಲಿನ್‌: ಕಲ್ಲಿದ್ದಲು ಗಣಿ ವಿಸ್ತರಣೆಗೆ ದಾರಿ ಮಾಡಿಕೊಡಲು ಜರ್ಮನಿಯ ಲುಟ್ಜೆರಾತ್ ಗ್ರಾಮವನ್ನು ಧ್ವಂಸಗೊಳಿಸುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಸ್ವೀಡನ್‌ನ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್ ಹಾಗೂ ಇತರರನ್ನು ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ.

ಪ್ರತಿಭಟನಕಾರರಿಗೆ ಬೆಂಬಲ ನೀಡುವ ಸಲುವಾಗಿ ಹಲವು ದಿನಗಳಿಂದ ಥನ್‌ಬರ್ಗ್ ಅವರು ಜರ್ಮನಿಯಲ್ಲಿ ತಂಗಿದ್ದಾರೆ. ಧ್ವಂಸ ಕಾರ್ಯಾಚರಣೆಗೆ ಅಡ್ಡಿಪಡಿಸಿದ ಆರೋಪದಲ್ಲಿ ಹಲವು ಮಂದಿ ಪ್ರತಿಭಟನಕಾರರನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT