ADVERTISEMENT

ಗ್ವಾಟೆಮಾಲಾದಲ್ಲಿ ಭೂಕುಸಿತ, 37ಕ್ಕೂ ಹೆಚ್ಚು ಸಾವು

ಏಜೆನ್ಸೀಸ್
Published 6 ನವೆಂಬರ್ 2020, 18:36 IST
Last Updated 6 ನವೆಂಬರ್ 2020, 18:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಟೆಗುಸಿಗಲ್ಪ (ಹೊಂಡುರಾಸ್‌): ಮಧ್ಯ ಅಮೆರಿಕದ ಗ್ವಾಟೆಮಾಲಾದಲ್ಲಿ ಭಾರಿ ಮಳೆಯಿಂದ ವಿವಿಧೆಡೆ ಗುಡ್ಡ ಕುಸಿತಗಳು ಸಂಭವಿಸಿವೆ. ಇಲ್ಲಿನ ಸ್ಯಾನ್‌ ಕ್ರಿಸ್ಟೊಬಾಲ್‌ ವೆರಪಾಜ್‌ ನಗರದಲ್ಲೂ ಭಾರಿ ಭೂಕುಸಿತವಾಗಿದೆ.

ಮನೆಗಳು ಗುಡ್ಡದಡಿ ಸಿಲುಕಿದ್ದು, 25ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಅಲ್ಲಿನ ಸರ್ಕಾರ ಮಾಹಿತಿ ನೀಡಿದೆ.

ಹ್ಯೂಹುಟೆನಾಂಗೊ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಲ್ಲಿ 12ಕ್ಕೂ ಹೆಚ್ಚು ಜನರು ಅಸುನೀಗಿದ್ದಾರೆ ಎಂದು ಸರ್ಕಾರ ತಿಳಿಸಿದೆ.

ADVERTISEMENT

ಮಧ್ಯ ಅಮೆರಿಕದಲ್ಲಿ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಗ್ವಾಟೆಮಾಲದಿಂದ ಪನಾಮಾವರೆಗೂ ಅನೇಕ ಭೂಕುಸಿತಗಳು ಸಂಭವಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.