ADVERTISEMENT

ವಿವಾದಿತ ಸಮುದ್ರಗಳಲ್ಲಿ ಚೀನಾ ಬೆದರಿಕೆ ಮುಂದುವರಿದಿದೆ: ಕಮಲಾ ಹ್ಯಾರಿಸ್‌ ಆರೋಪ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2021, 8:03 IST
Last Updated 24 ಆಗಸ್ಟ್ 2021, 8:03 IST
ಕಮಲಾ ಹ್ಯಾರಿಸ್‌
ಕಮಲಾ ಹ್ಯಾರಿಸ್‌   

ಸಿಂಗಪುರ (ಎಎಫ್‌ಪಿ): ದಕ್ಷಿಣ ಚೀನಾ ಸಮುದ್ರದ ಮೇಲೆ ಹಕ್ಕು ಸಾಧಿಸಲು ಬೀಜಿಂಗ್‌, ಈ ಸಮುದ್ರದ ವ್ಯಾಪ್ತಿಯಲ್ಲಿ ಬರುವ ಬಹುತೇಕ ದೇಶಗಳನ್ನು ಒತ್ತಾಯಿಸುವ, ಹೆದರಿಸುವ ಪ್ರಯತ್ನವನ್ನು ಮುಂದುವರಿಸಿದೆ ಎಂದು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ದೂರಿದ್ದಾರೆ.

ಸಿಂಗಪುರ ಪ್ರವಾಸದಲ್ಲಿರುವ ಅವರು, ‘ಬೀಜಿಂಗ್‌ನ ಈ ರೀತಿಯ ಕ್ರಮಗಳು ಇತರ ದೇಶಗಳ ಸಾರ್ವಭೌಮತೆಗೆ ಧಕ್ಕೆ ತರುತ್ತವೆ’ ಎಂದಿದ್ದಾರೆ.

‘ಬೀಜಿಂಗ್‌ನ ಈ ರೀತಿಯ ಬೆದರಿಕೆಗಳನ್ನು ಎದುರಿಸುವುದಕ್ಕೆ ಅಮೆರಿಕವು ತನ್ನ ಮಿತ್ರ ರಾಷ್ಟ್ರಗಳು ಮತ್ತು ಪಾಲುದಾರರಿಗೆ ನೆರವು ನೀಡುತ್ತದೆ ಮತ್ತು ಅವರ ಪರ ನಿಲ್ಲುತ್ತದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಏಷ್ಯಾಗೆ ಸಂಬಂಧಿಸಿದಂತೆ ಅಮೆರಿಕವು ಶಾಶ್ವತವಾದ ಬದ್ಧತೆಯನ್ನು ಹೊಂದಿದೆ ಎಂದು ಹ್ಯಾರಿಸ್‌ ಅವರು ಅಮೆರಿಕ ವಿದೇಶಾಂಗ ನೀತಿಯ ಕುರಿತು ಇದೇ ವೇಳೆ ತಿಳಿಸಿದ್ದಾರೆ.

ಇತ್ತೀಚೆಗೆ ಇಲ್ಲಿಗೆ ಭೇಟಿ ನೀಡಿದ ಅಮೆರಿಕದ ಉನ್ನತ ಅಧಿಕಾರಿ ಹ್ಯಾರಿಸ್ ಆಗಿದ್ದಾರೆ. ಆದರೆ, ಅವರ ಭೇಟಿಯ ಮೇಲೆ ಅಫ್ಗನ್‌ ಬಿಕ್ಕಟ್ಟು ಮತ್ತು ಅಮೆರಿಕ ವಿಶ್ವಾಸಾರ್ಹತೆಯ ಬಗೆಗಿನ ಅನುಮಾನಗಳ ಕರಿಛಾಯೆ ಆವರಿಸಿದೆ.

ಅಫ್ಗಾನಿಸ್ತಾನದಿಂದ ಅಮೆರಿಕದ ಪಡೆಗಳನ್ನು ಹಿಂಪಡೆಯುವ ಬೈಡನ್‌ ನಿರ್ಧಾರ ಸರಿಯಾದದ್ದು ಎಂದು ಹ್ಯಾರಿಸ್‌ ತಮ್ಮ ಮಂಗಳವಾರದ ಭಾಷಣದಲ್ಲಿ ಸಮರ್ಥಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.