ADVERTISEMENT

124 ವರ್ಷ ಹಳೆಯ ಚರ್ಚ್ ಬೆಂಕಿಗಾಹುತಿ

ಅಮೆರಿಕದ ಕೇಂದ್ರ ಟೆಕ್ಸಾಸ್‌ನಲ್ಲಿ ಅವಘಡ

ಏಜೆನ್ಸೀಸ್
Published 30 ಜುಲೈ 2019, 20:00 IST
Last Updated 30 ಜುಲೈ 2019, 20:00 IST
124 year old church
124 year old church   

ವೆಸ್ಟ್‌ಫೇಲಿಯಾ: ಕೇಂದ್ರ ಟೆಕ್ಸಾಸ್‌ನಲ್ಲಿನ 124 ವರ್ಷ ಹಳೆಯ ರೋಮನ್ ಕ್ಯಾಥೊಲಿಕ್ ಚರ್ಚ್ ಸೋಮವಾರ ಬೆಳಗ್ಗೆ ಅಗ್ನಿ ಆಕಸ್ಮಿಕದಲ್ಲಿ ಸಂಪೂರ್ಣ ನಾಶವಾಗಿದೆ.

ಆಸ್ಟಿನ್ ಕ್ಯಾಥೊಲಿಕ್ ಚರ್ಚ್ ಆಡಳಿತ ಮಂಡಳಿಯ ಫೇಸ್‌ಬುಕ್ ಪುಟದಲ್ಲಿ, ಅಗ್ನಿ ಆಕಸ್ಮಿಕದ ಚಿತ್ರ ಪ್ರಕಟಿಸಲಾಗಿದೆ.

‘ಅವಘಡದ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ’ ಎಂದು ಚರ್ಚ್ ಆಡಳಿತ ಮಂಡಳಿ ಹೇಳಿಕೆ ಬಿಡುಗಡೆ ಮಾಡಿದೆ. ಚರ್ಚ್‌ 1895ರಲ್ಲಿ ನಿರ್ಮಾಣವಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.