ADVERTISEMENT

ಚೀನಾದಿಂದ ಹಾಂಗ್‌ಕಾಂಗ್‌ನ ಸುದ್ದಿ ಸಂಸ್ಥೆ ಸ್ಥಗಿತ

ಏಜೆನ್ಸೀಸ್
Published 29 ಡಿಸೆಂಬರ್ 2021, 12:42 IST
Last Updated 29 ಡಿಸೆಂಬರ್ 2021, 12:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಾಂಗ್‌ಕಾಂಗ್‌, ಚೀನಾ (ಎಪಿ): ಹಾಂಗ್‌ಕಾಂಗ್‌ನ ಪ್ರಜಾಪ್ರಭುತ್ವ ಪರ ಧ್ವನಿಯಾದ ಸುದ್ದಿಸಂಸ್ಥೆಯೊಂದರ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿ ಅದರ ಆರು ಹಾಲಿ ಮತ್ತು ಮಾಜಿ ಸಂಪಾದಕರು ಮತ್ತು ಸದಸ್ಯರನ್ನು ಬಂಧಿಸಿದ ನಂತರ ಸಂಸ್ಥೆಯ ಸುದ್ದಿ ಜಾಲತಾಣ ಬುಧವಾರ ಸ್ಥಗಿತಗೊಂಡಿದೆ.

ತನ್ನ ಸುದ್ದಿ ಜಾಲತಾಣ ಮತ್ತು ಸಾಮಾಜಿಕ ಮಾಧ್ಯಮ ಇನ್ನು ಮುಂದೆ ಸುದ್ದಿ ನೀಡುವುದಿಲ್ಲ. ಅದನ್ನು ಸ್ಥಗಿತಗೊಳಿಸಲಾಗುವುದು. ತನ್ನ ಎಲ್ಲಾ ನೌಕರರನ್ನು ವಜಾಗೊಳಿಸಲಾಗಿದೆ ಎಂದು ಸ್ಟ್ಯಾಂಡ್‌ ನ್ಯೂಸ್‌ ಸಂಸ್ಥೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಹಾಂಗ್‌ಕಾಂಗ್‌ನಲ್ಲಿ ತನ್ನ ಪ್ರಕಾಶಕ ಜಿಮ್ಮಿ ಲೈ ಮತ್ತು ಸಂಪಾದಕರ ಬಂಧನದ ನಂತರ ಆ್ಯಪಲ್‌ ದಿನಪತ್ರಿಕೆ ಮೇಲೆ ದಾಳಿ ನಡೆಸಲಾಗಿತ್ತು. ನಂತರ ಇದು ಸ್ಥಗಿತಗೊಂಡಿತ್ತು. ಸ್ಟ್ಯಾಂಡ್‌ ನ್ಯೂಸ್‌ ಮಾತ್ರ ಕಾರ್ಯ ಮಾಡುತ್ತಿತ್ತು.

ADVERTISEMENT

ಹಾಂಕಾಂಗ್‌ ನಗರವು ಅರೆ ಸ್ವಾಯತ್ತತೆ ಹೊಂದಿರುವ ಚೀನಾದ ನಗರವಾಗಿದ್ದು, ಪ್ರಜಾಪ್ರಭುತ್ವ ಪರ ಧ್ವನಿಯನ್ನು ಅಡಗಿಸುವ ಕೆಲಸ ಇಲ್ಲಿ ನಡೆಯುತ್ತಿದೆ. ಅದರ ಮುಂದುವರಿದ ಭಾಗವಾಗಿ ಈ ಸುದ್ದಿಸಂಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.