ADVERTISEMENT

ವಾರ್ಷಿಕ 3000 ಭಾರತೀಯ ವೀಸಾಕ್ಕೆ ಬ್ರಿಟನ್‌ ಒಪ್ಪಿಗೆ

ಮೋದಿ–ಸುನಕ್‌ ಭೇಟಿಯಾದ ಒಂದು ಗಂಟೆಯಲ್ಲೇ ಬೆಳವಣಿಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ನವೆಂಬರ್ 2022, 6:45 IST
Last Updated 16 ನವೆಂಬರ್ 2022, 6:45 IST
ಜಿ20 ಸಮಾವೇಶದಲ್ಲಿ ಪ್ರಧಾನಿ ಮೋದಿ
ಜಿ20 ಸಮಾವೇಶದಲ್ಲಿ ಪ್ರಧಾನಿ ಮೋದಿ   

ಬ್ರಿಟನ್‌: ಜಿ20 ಸಮಾವೇಶದಲ್ಲಿ ಭಾರತದ ಪ್ರಧಾನಿ ಮೋದಿ ಮತ್ತು ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಭೇಟಿಯಾದ ಒಂದು ಗಂಟೆಯೊಳಗೆ ವಾರ್ಷಿಕ 3000 ಭಾರತೀಯ ವೀಸಾ ಅನುಮತಿಗೆ ಬ್ರಿಟನ್‌ ಒಪ್ಪಿಗೆ ನೀಡಿದೆ.

ಬ್ರಿಟನ್‌–ಭಾರತ ವಲಸೆ ಮತ್ತು ಪ್ರಯಾಣ ಪಾಲುದಾರಿಕೆ ಬಲವರ್ಧನೆ ನಿಟ್ಟಿನಲ್ಲಿ ಭಾರತವು ವೀಸಾ ಯೋಜನೆಯ ಲಾಭ ಪಡೆಯುತ್ತಿರುವ ಮೊದಲ ರಾಷ್ಟ್ರವೆಂದು ಬ್ರಿಟನ್‌ ಪ್ರಧಾನಿ ಕಚೇರಿಯ ಪ್ರಕಟಣೆ ತಿಳಿಸಿದೆ. ಉಭಯ ರಾಷ್ಟ್ರಗಳು ಹಿಂದಿನ ವರ್ಷ ಈ ಒಪ್ಪಂದಕ್ಕೆ ಸಹಿ ಹಾಕಿದ್ದವು.

ಈ ಯೋಜನೆಯಡಿ ಭಾರತದ 3000 ಸಾವಿರ ಯುವಕರು ಪ್ರತಿ ವರ್ಷ ಯುಕೆಯಲ್ಲಿ ಕೆಲಸ ಮಾಡುವ ಅವಕಾಶ ಪಡೆಯಲಿದ್ದಾರೆ. 18–30 ವಯೋಮಿತಿಯ ಭಾರತೀಯ ಯುವಕರು ಜೀವನದಲ್ಲಿ ಒಮ್ಮೆ ಬ್ರಿಟನ್‌ನ ವೃತ್ತಿ ಹಾಗೂ ಸಾಂಸ್ಕೃತಿಕ ವಿನಿಮಯದ ಭಾಗವಾಗಲಿದ್ದಾರೆ. 2023ರ ಪ್ರಾರಂಭದಲ್ಲಿ ಯೋಜನೆಗೆ ಚಾಲನೆ ಸಿಗುವ ನಿರೀಕ್ಷೆಯಿದೆ.

ADVERTISEMENT

ಸುನಕ್‌ ಪ್ರಧಾನಿಯಾದ ಬಳಿಕ ಮೊದಲ ಸಲ ಇಂಡೋನೇಷ್ಯಾದ ಬಾಲಿಯಲ್ಲಿ ಮೋದಿ ಹಾಗೂ ಸುನಕ್‌ ಭೇಟಿಯಾಗಿದ್ದರು. ನರೇಂದ್ರ ಮೋದಿ ಹಾಗೂ ರಿಷಿ ಸುನಕ್‌ ಜಿ20 ಸಮಾವೇಶದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ಟ್ವೀಟ್‌ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.