ದುಬೈ: ಕೆಂಪು ಸಮುದ್ರದಲ್ಲಿ ಸಾಗುತ್ತಿದ್ದ ಸರಕು ಸಾಗಣೆ ಹಡಗುಗಳ ಮೇಲೆ ಯೆಮೆನ್‌ನ ಹುಥಿ ಬಂಡುಕೋರರು ದಾಳಿ ನಡೆಸಿದಾಗ ಕಾಣೆಯಾದವರ ಪತ್ತೆಗಾಗಿ ನಡೆಯುತ್ತಿದ್ದ ಶೋಧ ಕಾರ್ಯಾಚರಣೆಯು ಮುಕ್ತಾಯಗೊಂಡಿದೆ.
ಘಟನೆಯಲ್ಲಿ ಒಟ್ಟು 10 ಜನರನ್ನು ರಕ್ಷಿಸಲಾಗಿದೆ. ನಾಲ್ವರು ಮೃತಪಟ್ಟಿದ್ದು, ಇತರ 11 ಜನರ ಸುಳಿವು ಪತ್ತೆಯಾಗಿಲ್ಲ ಎಂದು ಖಾಸಗಿ ಭದ್ರತಾ ಸಂಸ್ಥೆಗಳು ಸೋಮವಾರ ತಿಳಿಸಿವೆ.
ಜುಲೈ 7ರಂದು ಹಡಗೊಂದರ ಮೇಲೆ ದಾಳಿ ನಡೆದ ಒಂದು ದಿನದ ಬಳಿಕ ಮತ್ತೊಂದು ಹಡಗನ್ನು ಗುರಿಯಾಗಿಸಿ ದಾಳಿ ನಡೆಯಿತು. ಎರಡೂ ಲೈಬೀರಿಯಾ ಮೂಲದ ಹಡಗುಗಳಾಗಿವೆ.
ದಾಳಿಯ ಬಳಿಕ ನಾವಿಕರನ್ನು ನಾವು ಅಪಹರಿಸಿದ್ದೇವೆ ಎಂದು ಹುಥಿ ಬಂಡುಕೋರರು ಹೇಳಿಕೊಂಡಿದ್ದಾರೆ. ಆದರೆ ಇದಕ್ಕೆ ಯಾವುದೇ ಪುರಾವೆಗಳಿಲ್ಲ. ಯೆಮೆನ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯು, ನಾವಿಕರ ಅಪಹರಣ ನಡೆದಿದೆ ಎಂದಿದೆ.
ಹಡಗಿನಲ್ಲಿದ್ದ ತೈಲವು ಸಮುದ್ರದಲ್ಲಿ ಸೋರಿಕೆಯಾಗಿರುವುದರಿಂದ, ಜಲಚರಗಳಿಗೆ ತೊಂದರೆಯುಂಟಾಗಲಿದೆ ಎಂದು ಕಳವಳ ವ್ಯಕ್ತವಾಗಿದೆ.
2023ರ ಡಿಸೆಂಬರ್‌ನಿಂದ 2024ರ ಡಿಸೆಂಬರ್‌ವರೆಗೆ ಹುಥಿ ಉಗ್ರರು 100ಕ್ಕೂ ಅಧಿಕ ಹಡಗುಗಳನ್ನು ಗುರಿಯಾಗಿಸಿ ಕ್ಷಿಪಣಿ ಮತ್ತು ಡ್ರೋನ್‌ಗಳಿಂದ ದಾಳಿ ನಡೆಸಿದ್ದಾರೆ. ಈ ದಾಳಿಗಳಲ್ಲಿ ನಾಲ್ಕು ಹಡಗುಗಳು ಮುಳುಗಿದ್ದು, ಕನಿಷ್ಠ 8 ನಾವಿಕರು ಸಾವಿಗೀಡಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.