ADVERTISEMENT

ಲಂಡನ್‌ನಲ್ಲಿ ಹೈದರಾಬಾದ್‌ ವ್ಯಕ್ತಿಯ ಹತ್ಯೆ

ಏಜೆನ್ಸೀಸ್
Published 10 ಮೇ 2019, 12:45 IST
Last Updated 10 ಮೇ 2019, 12:45 IST
   

ಲಂಡನ್: ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬನನ್ನು ಇಲ್ಲಿನ ಟೆಸ್ಕೋ ಸೂಪರ್‌ ಮಾರ್ಕೆಟ್‌ ಬಳಿ ಅಪರಿಚಿತ ವ್ಯಕ್ತಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.

ಮೊಹಮ್ಮದ್ ನಾದಿಮುದ್ದೀನ್ ಹತ್ಯೆಯಾದವ. ಈತ ಆರು ವರ್ಷಗಳಿಂದ ಟೆಸ್ಕೋ ಸೂಪರ್‌ ಮಾರ್ಕೆಟ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದನು.

ನಾದಿಮುದ್ದೀನ್ ಬುಧವಾರ ಕೆಲಸ ಮುಗಿಸಿ ಮನೆಗೆ ಬಂದಿಲ್ಲ. ಈ ಬಗ್ಗೆ ಮಾರ್ಕೆಟ್‌ನ ಆಡಳಿತ ಮಂಡಳಿಯನ್ನು ಕುಟಂಬದವರು ವಿಚಾರಿಸಿದ್ದಾರೆ. ಹುಡುಕಾಟ ನಡೆಸಿದಾಗ ಈತನ ಮೃತದೇಹ ಮಾರ್ಕೆಟ್‌ನ ಪಾರ್ಕಿಂಗ್ ಸ್ಥಳದಲ್ಲಿ ದೊರೆತಿದೆ.

ADVERTISEMENT

ಏಷಿಯನ್ ಮೂಲದ ವ್ಯಕ್ತಿಯಿಂದಲೇ ನಾದಿಮುದ್ದೀನ್ ಹತ್ಯೆಯಾಗಿದೆ ಎಂದು ಕುಟುಂಬದ ಆಪ್ತ ಫಹೀಮ್ ಖುರೇಶಿ ಶಂಕಿಸಿದ್ದಾರೆ.

ಸುಷ್ಮಾ ಸ್ವರಾಜ್‌ಗೆ ಮೊರೆ
ನಾದಿಮುದ್ದೀನ್‌ನ ಕುಟುಂಬದವರು ಲಂಡನ್‌ಗೆ ತೆರಳಲು ಸಹಾಯ ಮಾಡಬೇಕೆಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬಳಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.