ADVERTISEMENT

ಮಹಿಳೆಯರೆಂದರೆ ನನಗೆ ತುಂಬಾ ಇಷ್ಟ, ಪುರುಷರ ಬಗ್ಗೆ ಆಸಕ್ತಿ ಇಲ್ಲ: ಟ್ರಂಪ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಫೆಬ್ರುವರಿ 2026, 4:02 IST
Last Updated 20 ಫೆಬ್ರುವರಿ 2026, 4:02 IST
<div class="paragraphs"><p>ಡೊನಾಲ್ಡ್‌ ಟ್ರಂಪ್‌</p></div>

ಡೊನಾಲ್ಡ್‌ ಟ್ರಂಪ್‌

   

ಚಿತ್ರ ಕೃಪೆ: ಗೆಟ್ಟಿ

ವಾಷಿಂಗ್ಟನ್‌: ಇಲ್ಲಿ ನಡೆದ ‘ಗಾಜಾ ಶಾಂತಿ ಮಂಡಳಿ’ ಸಭೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಪುರುಷರು ಮತ್ತು ಮಹಿಳೆಯರ ಕುರಿತು ಹೇಳಿದ ಮಾತುಗಳು ಚರ್ಚೆಗೆ ಕಾರಣವಾಗಿವೆ.

ADVERTISEMENT

ಗುರುವಾರ ನಡೆದ ಮಂಡಳಿಯ ಮೊದಲ ಸಭೆಯಲ್ಲಿ ದೀರ್ಘ ಭಾಷಣ ಮಾಡಿದ ಟ್ರಂಪ್‌, ‘ಪುರುಷರ ಬಗ್ಗೆ ನನಗೆ ಯಾವುದೇ ಆಸಕ್ತಿಯಿಲ್ಲ.... ಮಹಿಳೆಯರೆಂದರೆ ಇಷ್ಟ’ ಎಂದಿದ್ದಾರೆ.

ತಮ್ಮ ಆಹ್ವಾನವನ್ನು ಸ್ವೀಕರಿಸಿ ಸಭೆಗೆ ಹಾಜರಾಗಿದ್ದ ಪೆರುಗ್ವೆ ಅಧ್ಯಕ್ಷ ಸ್ಯಾಂಟಿಯಾಗೊ ಪೆನಾ ಅವರನ್ನು ಉದ್ದೇಶಿಸಿ ಅವರು ಈ ಮೇಲಿನ ಹೇಳಿಕೆಯನ್ನು ನೀಡಿದ್ದರು.

ಪೆನಾ ಅವರ ಕಡೆ ತಿರುಗಿ ಮಾತು ಆರಂಭಿಸಿದ ಟ್ರಂಪ್‌, ‘ಅಧ್ಯಕ್ಷರೇ... ಇಲ್ಲಿಗೆ ಆಗಮಿಸಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು’ ಎಂದು ಹೇಳಿದ್ದಾರೆ. ನಂತರ ಪೆನಾ ಅವರ ಯೌವನ ಮತ್ತು ರೂಪವನ್ನು ಕೊಂಡಾಡಿದ ಟ್ರಂಪ್‌, ‘ಯುವ ಸುಂದರ ವ್ಯಕ್ತಿ. ಯುವಕರಾಗಿ, ಸುಂದರವಾಗಿ ಇರುವುದು ಯಾವಾಗಲೂ ಒಳ್ಳೆಯದು’ ಎಂದಿದ್ದಾರೆ.

ಮುಂದುವರಿದು, ‘ಇದರರ್ಥ ನಾನು ನಿಮ್ಮನ್ನು ಇಷ್ಟಪಡಲೇಬೇಕು ಎಂದಲ್ಲ... ನನಗೆ ಯುವಕರು, ಸುಂದರ ಪುರುಷರು ಇಷ್ಟವಿಲ್ಲ’ ಎಂದು ಹೇಳಿದ್ದಾರೆ.

‘ಮಹಿಳೆಯರು? ಅದು ನನಗೆ ತುಂಬಾ ಇಷ್ಟ... ಪುರುಷರ ಬಗ್ಗೆ ನನಗೆ ಯಾವುದೇ ಆಸಕ್ತಿ ಇಲ್ಲ’ ಎಂದು ನಕ್ಕಿದ್ದಾರೆ.

ಇದೇ ವೇಳೆ, ವಿಶ್ವಸಂಸ್ಥೆಯಲ್ಲಿ ನಡೆದ ಲಿಫ್ಟ್‌ ಅಚಾತುರ್ಯದ ಬಗ್ಗೆ ಪ್ರಸ್ತಾಪಿಸಿದ ಟ್ರಂಪ್‌, ತಮ್ಮ ಪತ್ನಿಯ ದೇಹದ ಭಾಗವೊಂದು ತಮ್ಮನ್ನು ಬೀಳುವುದರಿಂದ ರಕ್ಷಿಸಿದೆ ಎಂದು ತಮಾಷೆ ಮಾಡಿದ್ದಾರೆ.

‘ಲಿಫ್ಟ್‌ನಲ್ಲಿ ಹೋಗುತ್ತಿದ್ದ ವೇಳೆ ಅಮೆರಿಕದ ಪ್ರಥಮ ಮಹಿಳೆ ನನ್ನ ಮುಂದೆ ಇದ್ದದ್ದು ನನ್ನ ಅದೃಷ್ಟ. ಏಕೆಂದರೆ ಅವರ ದೇಹದ ನಿರ್ದಿಷ್ಟ ಭಾಗವೊಂದು ಹಿಡಿದುಕೊಳ್ಳುವ ಮೂಲಕ ನಾನು ಬೀಳುವುದು ತಪ್ಪಿತು’ ಎಂದು ಹೇಳಿದ್ದಾರೆ. ಟ್ರಂಪ್‌ ಅವರ ಮಾತಿಗೆ ಸಭೆಯಲ್ಲಿದ್ದವರೆಲ್ಲರೂ ಹೊಟ್ಟೆ ಹುಣ್ಣಾಗುವ ಹಾಗೆ ನಕ್ಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.