ADVERTISEMENT

ಪಾಕಿಸ್ತಾನ| 2023ರ ಗಲಭೆ: ಇಮ್ರಾನ್ ಖಾನ್ 17 ಬೆಂಬಲಿಗರಿಗೆ 10 ವರ್ಷ ಜೈಲು ಶಿಕ್ಷೆ

ಪಿಟಿಐ
Published 10 ಸೆಪ್ಟೆಂಬರ್ 2025, 11:11 IST
Last Updated 10 ಸೆಪ್ಟೆಂಬರ್ 2025, 11:11 IST
   

ಲಾಹೋರ್‌: 2023ರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ 17 ಜನ ಬೆಂಬಲಿಗರಿಗೆ, ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.

2023ರ ಮೇ 9 ರಂದು ಇಮ್ರಾನ್‌ ಖಾನ್‌ ಬಂಧನ ವಿರೋಧಿಸಿ ದೇಶದಾದ್ಯಂತ ನಡೆದ ಪ್ರತಿಭಟನೆಯು ಗಲಭೆ ಮತ್ತು ಹಿಂಸಾಚಾರಕ್ಕೆ ಕಾರಣವಾಗಿತ್ತು.

ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್(ಪಿಟಿಐ) ಪಕ್ಷದ ನಾಯಕ ಹಾಗೂ ಪಂಜಾಬ್‌ನ ಮಾಜಿ ಸಚಿವ ಯಾಸ್ಮಿನ್ ರಶೀದ್ ಮತ್ತು ಮಿಯಾನ್ ಮೆಹಮೂದರ್ ರಶೀದ್, ಮಾಜಿ ಗವರ್ನರ್‌ ಒಮೆರ್ ಸರ್ಫ್ರಾಜ್ ಚೀಮಾ ಅವರಿಗೆ ಶಿಕ್ಷೆ ವಿಧಿಸಲಾಗಿದೆ.

ADVERTISEMENT

ನ್ಯಾಯಾಲಯದ ತೀರ್ಪನ್ನು ವಿರೋಧಿಸಿರುವ ಪಿಟಿಐ ಪಕ್ಷವು, ‘ಇದು ರಾಜಕೀಯ ಪ್ರೇರಿತ ತೀರ್ಪು’ ಎಂದು ಕಿಡಿಕಾರಿದೆ.

ಘಟನೆಗೆ ಸಂಬಂಧಿಸಿದಂತೆ 10 ಸಾವಿರಕ್ಕೂ ಅಧಿಕ ಪಿಟಿಐ ಕಾರ್ಯಕರ್ತರನ್ನು ಬಂಧಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.