ADVERTISEMENT

ಅಮೆರಿಕ ಇತಿಹಾಸದಲ್ಲೇ ಎರಡು ಬಾರಿ ಮಹಾಭಿಯೋಗಕ್ಕೆ ಒಳಗಾದ ಮೊದಲ ಅಧ್ಯಕ್ಷ ಟ್ರಂಪ್

ಏಜೆನ್ಸೀಸ್
Published 14 ಜನವರಿ 2021, 2:04 IST
Last Updated 14 ಜನವರಿ 2021, 2:04 IST
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲುಂಡ ನಂತರ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಎರಡನೇ ಬಾರಿಗೆ ದೋಷಾರೋಪಣೆಯನ್ನು(ಮಹಾಭಿಯೋಗ) ಅಲ್ಲಿನ ಸಂಸತ್‌ ಹೊರಿಸಿದೆ. ಆ ಮೂಲಕ ಅಮೆರಿಕದ ಇತಿಹಾಸದಲ್ಲೇ ಎರಡು ಬಾರಿ ಮಹಾಭಿಯೋಗಕ್ಕೆ ಗುರಿಯಾದ ಅಧ್ಯಕ್ಷರಲ್ಲಿ ಟ್ರಂಪ್‌ ಮೊದಲಿಗರೆಂದು ದಾಖಲಾಗಿದ್ದಾರೆ.

ಅಧಿಕೃತವಾಗಿ ಹುದ್ದೆ ತೊರೆದು ಹೋಗಲು ಡೊನಾಲ್ಡ್ ಟ್ರಂಪ್‌ಗೆ ಒಂದು ಕೊನೆಯ ಅವಕಾಶವನ್ನು ಡೆಮೋಕ್ರಾಟ್ಸ್ ನೀಡಿದ್ದಾರೆ. ಟ್ರಂಪ್ ಅಧ್ಯಕ್ಷೀಯ ಅವಧಿ ಕೊನೆಯಾಗಲು ಒಂದು ವಾರ ಮಾತ್ರ ಬಾಕಿ ಉಳಿದಿದ್ದು, ಯಾವಾಗ ಹುದ್ದೆ ಬಿಟ್ಟು ನಿರ್ಗಮಿಸುವರು ಎನ್ನುವುದು ಇನ್ನೂ ಖಚಿತವಾಗಿಲ್ಲ.

ಅಮೆರಿಕದ ಕ್ಯಾಪಿಟಲ್ ಕಟ್ಟಡದ ಮೇಲೆ ನಡೆದ ದಾಳಿ ಮತ್ತು ಹಿಂಸಾಚಾರ, ಐವರ ಸಾವು ಪ್ರಕರಣ ದೊಡ್ಡ ಸಮಸ್ಯೆ ಸೃಷ್ಟಿಸಿದೆ. ಡೊನಾಲ್ಡ್ ಟ್ರಂಪ್ ಬೆಂಬಲಿಗರ ಕೃತ್ಯ ಇದಾಗಿರುವುದರಿಂದ, ಟ್ರಂಪ್ ಅಮೆರಿಕ ಸಂಸತ್‌ನಲ್ಲಿ ತೀವ್ರ ಮುಖಭಂಗಕ್ಕೆ ಒಳಗಾಗಿದ್ದಾರೆ.

ADVERTISEMENT

ಡೊನಾಲ್ಡ್‌ ಟ್ರಂಪ್‌ ಎರಡನೇ ಬಾರಿಗೆ ವಾಗ್ದಂಡನೆಗೂ ಗುರಿಯಾಗಿದ್ದಾರೆ. ಬುಧವಾರ ಜನಪ್ರತಿನಿಧಿಗಳ ಸಭೆಯಲ್ಲಿ(ಹೌಸ್‌ ಆಫ್‌ ರೆಪ್ರಸೆಂಟೇಟಿವ್ಸ್‌) ವಾಗ್ದಂಡನೆ ಕುರಿತು ಸುದೀರ್ಘ ಚರ್ಚೆ ನಡೆದಿದೆ. ನಿರ್ಣಯವನ್ನು ಮತಕ್ಕೆ ಹಾಕುವ ಮುನ್ನ ಬಹುತೇಕ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.