ADVERTISEMENT

ಚೀನಾದಲ್ಲಿ ಮನೆ ಖರೀದಿಗೆ ಡೌನ್ ಪೇಮೆಂಟ್ ಆಗಿ ಬೆಳ್ಳುಳ್ಳಿ, ಕಲ್ಲಂಗಡಿ ಸ್ವೀಕಾರ

ಐಎಎನ್ಎಸ್
Published 5 ಜುಲೈ 2022, 16:42 IST
Last Updated 5 ಜುಲೈ 2022, 16:42 IST
ಬೆಳ್ಳುಳ್ಳಿ
ಬೆಳ್ಳುಳ್ಳಿ   

ಬೀಜಿಂಗ್: ಹೊಸ ಮನೆ ಕೊಳ್ಳುವವರನ್ನು ಆಕರ್ಷಿಸುವ ದೃಷ್ಟಿಯಿಂದ ಚೀನಾದ ಡೆವಲಪರ್‌ಗಳು ಬೆಳ್ಳುಳ್ಳಿ, ಕಲ್ಲಂಗಡಿ ಮತ್ತು ಪೀಚ್‌ ಹಣ್ಣುಗಳನ್ನು ಡೌನ್ ಪೇಮೆಂಟ್ ಆಗಿ ಸ್ವೀಕರಿಸಲು ಮುಂದಾಗಿದ್ದಾರೆ.

ಸತತ 11ನೇ ತಿಂಗಳು ಚೀನಾದಲ್ಲಿ ಮನೆಗಳ ಮಾರಾಟವು ತೀವ್ರ ಕುಸಿತ ಕಂಡಿದೆ. ಈ ವಾರ ಕೆಲ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿಗಳ ಮಾಲೀಕರು ಸಾಲದ ಸುಸ್ತಿದಾರರಾಗಿದ್ದಾರೆ.

ಕಳೆದ ವಾರ, ಈಶಾನ್ಯ ನಗರ ವೂಕ್ಸಿಯದ ರಿಯಲ್ ಎಸ್ಟೇಟ್ ಕಂಪನಿಯೊಂದು ಆಸ್ತಿ ಖರೀದಿಗೆ ಡೌನ್ ಪೇಮೆಂಟ್ ಆಗಿ 188,888 ಚೈನೀಶ್ ಯುವಾನ್ ಬೆಲೆ ಬಾಳುವ ಪೀಚ್ ಹಣ್ಣುಗಳನ್ನು ಸ್ವೀಕರಿಸುವುದಾಗಿ ಹೇಳಿತ್ತು.

ADVERTISEMENT

ನಾಂಜಿಂಗ್ ಬಳಿಯ ಮತ್ತೊಂದು ಕಂಪನಿಯು ರೈತರಿಂದ 5,000 ಕೆ.ಜಿ ಕಲ್ಲಂಗಡಿ ಹಣ್ಣನ್ನು ಮುಂಗಡವಾಗಿ ಸ್ವೀಕರಿಸುವುದಾಗಿ ಹೇಳಿತ್ತು. ಇದು 100,000 ಚೈನೀಸ್ ಯುವಾನ್‌ನಷ್ಟು ಬೆಲೆ ಬಾಳುತ್ತದೆ ಎಂದು ಬಿಬಿಸಿ ವರದಿ ಮಾಡಿದೆ. ಮುಂದಿನ ಶುಕ್ರವಾರದವರೆಗೆ ಈ ಆಫರ್ ನೀಡಲಾಗಿದೆ.

ಕಳೆದ ತಿಂಗಳು ಕೇಂದ್ರ ಚೀನಾದ ಕಂಪನಿಯೊಂದು ಪ್ರಾಪರ್ಟಿ ಖರೀದಿಗೆ ಡೌನ್ ಪೇಮೆಂಟ್ ಆಗಿ ಬೆಳ್ಳುಳ್ಳಿ ಸ್ವೀಕರಿಸುವುದಾಗಿ 16 ದಿನ ಕ್ಯಾಂಪೇನ್ ಮಾಡಿತ್ತು.

‘ನಾವು ಪ್ರೀತಿಯಿಂದ ರೈತರಿಗೆ ಸಹಾಯ ಮಾಡುತ್ತಿದ್ದೇವೆ. ಿದು ಅವರಿಗೆ ಮನೆ ಕೊಳ್ಳಲು ನೆರವಾಗುತ್ತದೆ’ಎಂದು ಕಂಪನಿ ಹೇಳಿದೆ.

ಒಂದು ಕ್ಯಾಟಿ (600 ಗ್ರಾಂ ಬೆಳ್ಳುಳ್ಳಿ)ಯು 5 ಯುವಾನ್ ಬೆಲೆ ಬಾಳುತ್ತದೆ. ಈ ಕಂಪನಿಯು 30 ಮನೆಗಳ ಮಾರಾಟದಲ್ಲಿ 860,000 ಕ್ಯಾಟಿಯಷ್ಟು ಬೆಳ್ಳುಳ್ಳಿ ಸ್ವೀಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.