ADVERTISEMENT

ಇರಾಕ್‌ನ ತೈಲ ಘಟಕಗಳಲ್ಲಿ ಮಹಿಳಾ ಎಂಜಿನಿಯರ್‌ಗಳು..

ಏಜೆನ್ಸೀಸ್
Published 28 ಫೆಬ್ರುವರಿ 2021, 9:19 IST
Last Updated 28 ಫೆಬ್ರುವರಿ 2021, 9:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಸ್ರಾ: ದಕ್ಷಿಣ ಇರಾಕ್‌ನ ಕಚ್ಚಾ ತೈಲ ಉತ್ಪಾದಿಸುವ ಬಾವಿಯಲ್ಲಿ ಯುವತಿ ಜೈನಾಬ್‌ ಅಮ್ಜದ್‌, ಕಚ್ಚಾ ತೈಲದ ಬಾವಿಯೊಳಗೆ ಸೋನಾರ್ ಅಲೆಗಳನ್ನು ಪತ್ತೆ ಮಾಡುವ ಸಂವೇದಕವನ್ನು ಇಳಿಸುತ್ತಾಳೆ.

ತೈಲ ಸಮೃದ್ಧ ಪ್ರಾಂತ್ಯ ಬಸ್ರಾದಲ್ಲಿ ಆಯತ್ ರಾವ್ತಾನ್ ಎಂಬ ಯುವತಿ ದೊಡ್ಡ ದೊಡ್ಡ ಕೊಳವೆಗಳನ್ನು ತೈಲದ ಬಾವಿಯ ಯಂತ್ರಕ್ಕೆ ಜೋಡಿಸುತ್ತಾರೆ. ಈ ಯಂತ್ರ ಭೂಮಿಯೊಳಗೆ ಇಳಿದು, ಶಿಲಾ ರಚನೆಗಳ ಬಗ್ಗೆ ಸಂಕೇತದ ರೂಪದಲ್ಲಿ ದತ್ತಾಂಶವನ್ನು ಕಳುಹಿಸುತ್ತವೆ. ಆ ಸಂಕೇತವನ್ನು ಈಕೆ ಅರ್ಥ ಮಾಡಿಕೊಂಡು, ದಾಖಲಿಸುತ್ತಾಳೆ.

ತೈಲ ಪ್ರಧಾನ ರಾಷ್ಟ್ರ ಇರಾಕ್‌ನಲ್ಲಿ 24ರ ಹರೆಯದ ಕೆಲವು ಯುವತಿಯರು, ತಮಗೆ ವಿಧಿಸಿರುವ ಸಾಂಪ್ರದಾಯಿಕ ನೀತಿ ನಿಯಮಗಳನ್ನು ಮೀರಿ, ಪುರುಷರಿಗೆ ಸರಿ ಸಮನಾದ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಈ ಉದಾಹರಣೆಗಳೇ ಸಾಕ್ಷಿಯಾಗಿವೆ.

ADVERTISEMENT

‌ಇರಾಕ್‌ನಲ್ಲಿ ಮೊದಲ ಬಾರಿಗೆ ಇಬ್ಬರು ಮಹಿಳಾ ಎಂಜಿನಿಯರ್‌ಗಳಿಗೆ ಅಲ್ಲಿನ ಪೆಟ್ರೋಲಿಯಂ ಕಂಪನಿಯ ಪ್ರಮುಖ ಹುದ್ದೆಗಳನ್ನು ನೀಡಲಾಗಿದೆ.ಪೆಟ್ರೋಲಿಯಂ ಬಾವಿ, ನಿಕ್ಷೇಪಗಳಲ್ಲಿರುವ ಕಠಿಣ ಪರಿಶ್ರಮದ ಕೆಲಸಗಳ ಜವಾಬ್ದಾರಿ ನಿರ್ವಹಿಸಲು 24ರ ಹರೆಯದ ಈ ಎಂಜಿನಿಯರ್‌ಗಳು ಮುಂದಾಗಿದ್ದಾರೆ.

ಕಂಪನಿಗಳ ಕಚೇರಿಯ ಕೆಲಸಗಳಿಗಷ್ಟೇ ಸೀಮಿತವಾಗಿದ್ದ ಮಹಿಳೆಯರು ಇದೀಗ ನೇರವಾಗಿ ನಿಕ್ಷೇಪಗಳ ಪ್ರದೇಶದಲ್ಲಿ ಕೆಲಸ ನಿರ್ವಹಿಸಲು ಮುಂದಾಗಿದ್ದಾರೆ. ಪ್ರಾಯೋಗಿಕವಾಗಿ ಅವರಿಗೆ ಈ ಜವಾಬ್ದಾರಿ ನೀಡಲಾಗಿದ್ದು, ಕಾರ್ಯನಿರ್ವಹಿಸುವ ವಿಶ್ವಾಸದಲ್ಲಿ ಈ ಮಹಿಳೆಯರು ಇದ್ದಾರೆ.

ಈ ಯುವತಿಯರು, ನೀತಿ ನಿಯಮಗಳನ್ನು ಮೀರಿದ ಬುದ್ಧಿವಂತ ಮಹಿಳೆಯರ ಹೊಸ ಪೀಳಿಗೆಯ ಭಾಗವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.