ADVERTISEMENT

ಪಾಕ್ ಬಂಧನದಲ್ಲಿರುವ ಭಾರತೀಯ ನಾಗರಿಕರ ಶೀಘ್ರ ಬಿಡುಗಡೆಗೆ ಮನವಿ

ಪಿಟಿಐ
Published 1 ಜುಲೈ 2021, 13:41 IST
Last Updated 1 ಜುಲೈ 2021, 13:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪಾಕಿಸ್ತಾನದ ಜೈಲುಗಳಲ್ಲಿ ಬಂಧಿಯಾಗಿರುವ ಭಾರತೀಯ ನಾಗರಿಕರು, ಭದ್ರತಾ ಸಿಬ್ಬಂದಿ ಹಾಗೂ ಮೀನುಗಾರರನ್ನು ಶೀಘ್ರದಲ್ಲೇ ಬಿಡುಗಡೆ ಮಾಡಿ ವಾಪಸ್ ಸ್ವದೇಶಕ್ಕೆ ಕಳುಹಿಸುವಂತೆ ಭಾರತ ಗುರುವಾರ ಕೋರಿದೆ.

2008ರ ಒಪ್ಪಂದದ ನಿಬಂಧನೆಗಳಿಗೆ ಅನುಗುಣವಾಗಿ ಉಭಯ ದೇಶಗಳು ನಾಗರಿಕ ಕೈದಿಗಳು ಹಾಗೂ ಮೀನುಗಾರರ ಪಟ್ಟಿಗಳನ್ನು ಪರಸ್ಪರ ಹಂಚಿಕೊಂಡಿವೆ.

ಭಾರತದ ವಶದಲ್ಲಿರುವ 271 ಪಾಕಿಸ್ತಾನಿ ನಾಗರಿಕ ಕೈದಿಗಳು ಮತ್ತು 74 ಮೀನುಗಾರರ ಪಟ್ಟಿಯನ್ನು ಹಸ್ತಾಂತರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ತಿಳಿಸಿದೆ.

ಇದಕ್ಕೆ ಸಮಾನವಾಗಿ ಪಾಕಿಸ್ತಾನ ಕೂಡಾ ತನ್ನ ವಶದಲ್ಲಿರುವ ಭಾರತದ 51 ನಾಗರಿಕ ಕೈದಿಗಳು ಹಾಗೂ 558 ಮೀನುಗಾರರ ಪಟ್ಟಿಯನ್ನು ಹಂಚಿಕೊಂಡಿದೆ.

ಭಾರತೀಯ ನಾಗರಿಕ ಕೈದಿಗಳು, ಭದ್ರತಾ ಸಿಬ್ಬಂದಿಗಳು ಮತ್ತು ಮೀನುಗಾರರನ್ನು ಅವರ ದೋಣಿಗಳ ಸಹಿತ ಶೀಘ್ರದಲ್ಲೇ ಬಿಡುಗಡೆ ಮಾಡಿ ವಾಪಸ್ ಕಳುಹಿಸಲು ಕ್ರಮ ಕೈಗೊಳ್ಳುವಂತೆ ಕೇಳಲಾಗಿದೆ.

ಮಾನವೀಯತೆಯ ಆಧಾರದ ಮೇಲೆ ಎರಡು ದೇಶಗಳ ವಶದಲ್ಲಿರುವ ಕೈದಿಗಳು ಹಾಗೂ ಮೀನುಗಾರರಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಪರಿಹರಿಸಲು ಭಾರತ ಬದ್ಧವಾಗಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.