ADVERTISEMENT

ಹೈಸ್ಪೀಡ್‌ ಹಡಗು ನಿರ್ಮಾಣ: ಮಾಲ್ದೀವ್ಸ್‌ಗೆ ನೆರವು ನೀಡಿದ ಭಾರತ

ಪಿಟಿಐ
Published 18 ಫೆಬ್ರುವರಿ 2026, 16:01 IST
Last Updated 18 ಫೆಬ್ರುವರಿ 2026, 16:01 IST
.
.   

ಮಾಲೆ: ಎರಡು ಹವಳ ದ್ವೀಪಗಳ ನಡುವೆ ಸಾರಿಗೆ ಸಂಪರ್ಕ ಪ್ರಾರಂಭಿಸಲು ಅಗತ್ಯವಿರುವ 12 ದೋಣಿಗಳ ಪೈಕಿ ಭಾರತವು ಮೊದಲನೇ ಹೈಸ್ಪೀಡ್‌ ಹಡಗು ನಿರ್ಮಾಣಕ್ಕೆ ಮಾಲ್ದೀವ್ಸ್‌ಗೆ ಸಹಾಯ ಮಾಡಿದೆ ಎಂದು ಸರ್ಕಾರ ಒಡೆತನದ ಪಿಎಸ್‌ಎಂ ನ್ಯೂಸ್‌ ವರದಿ ಮಾಡಿದೆ.

ಅಗತ್ಯ ಸಾರ್ವಜನಿಕ ಸೇವೆಗಳು ಮತ್ತು ಯೋಜನೆಗಳನ್ನು ಸ್ಥಾಪಿಸುವಲ್ಲಿ ಮಾಲ್ದೀವ್ಸ್‌ಗೆ ಬೆಂಬಲ ನೀಡುವ ಬದ್ಧತೆಯನ್ನು ಭಾರತ ಪುನರುಚ್ಚರಿಸಿದೆ ಎಂದು ಮಾಲ್ದೀವ್ಸ್‌ನಲ್ಲಿ ಭಾರತೀಯ ಹೈಕಮಿಷನರ್‌ ಜಿ.ಬಾಲಸುಬ್ರಮಣಿಯನ್‌ ಅವರು ತಿಳಿಸಿದ್ದಾರೆ ಎಂದು ಅದು ಹೇಳಿದೆ.

ಫಾಫು ಮತ್ತು ಧಾಲು ‌ಹವಳ ದ್ವೀಪಗಳಿಗೆ ಜಲ ಸಂಪರ್ಕ ಕಲ್ಪಿಸುವ ಸೇವೆಗೆ ಚಾಲನೆ ನೀಡಿ ಮಾತನಾಡಿದ  ಜಿ.ಬಾಲಸುಬ್ರಮಣಿಯನ್‌ ಅವರು, ‘ಉಭಯ ದೇಶಗಳ ನಡುವಿನ ಒಪ್ಪಂದದ ಭಾಗವಾಗಿ ಭಾರತವು ಮಾಲ್ದೀವ್ಸ್‌ಗೆ 12 ಹೈಸ್ಪೀಡ್‌ ಹಡಗುಗಳನ್ನು ಒದಗಿಸುತ್ತದೆ’ ಎಂದು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.