ಭಾರತ ಮತ್ತು ಪಾಕಿಸ್ತಾನ
(ಐಸ್ಟೋಕ್ ಸಂಗ್ರಹ ಚಿತ್ರ)
ಲಾಹೋರ್: ಪಾಕಿಸ್ತಾನದ ಮೂರು ವಾಯುನೆಲೆಗಳನ್ನು ಗುರಿಯಾಗಿಸಿ ಭಾರತದ ಸೇನೆಯು ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ ಎಂದು ಪಾಕಿಸ್ತಾನವು ಶನಿವಾರ ಹೇಳಿದೆ
ಸೇನೆಯ ವಕ್ತಾರ ಲೆಫ್ಟಿನಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಅವರು ತುರ್ತು ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದರು.
ಬೆಳಗಿನ ಜಾವ 4 ಗಂಟೆ ವೇಳೆಗೆ ರಾವಲ್ಪಿಂಡಿಯ ನೂರ್ ಖಾನ್, ಚಾಕ್ವಾಲ್‌ನ ಮುರಿದ್, ಜಂಗ್ ಜಿಲ್ಲೆಯ ರಫೀಖಿ ವಾಯುನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ತಿಳಿಸಿದರು.
ಆಗಸದಿಂದಲೇ ಭೂಮಿಯಲ್ಲಿನ ಗುರಿ ಕೇಂದ್ರೀಕರಿಸಿ ಪ್ರಯೋಗಿಸವು ಕ್ಷಿಪಣಿಗಳನ್ನು ಜೆಟ್ ಬಳಸಿ ಪ್ರಯೋಗಿಸಿದೆ. ಆದರೆ, ಎಲ್ಲ ವಾಯುನೆಲೆಗಳು ಸುರಕ್ಷಿತವಾಗಿವೆ ಎಂದು ವಿವರಿಸಿದರು.
ಕೆಲ ಹೊತ್ತಿನ ನಂತರ ಸರ್ಕಾರದ ಮಾಧ್ಯಮ ಪಿಟಿವಿ ವಾಹಿನಿಯು, ಪಾಕಿಸ್ತಾನ ಸೇನೆಯು ಮಧ್ಯಮ ವಲಯದ ಫತೇಹ್ –1 ಕ್ಷಿಪಣಿಗಳನ್ನು ಬಳಸಿ ಪ್ರತಿ ದಾಳಿ ನಡೆಸಿದೆ ಎಂದು ತಿಳಿಸಿದೆ.
ಪಾಕಿಸ್ತಾನದ ನೆಲೆ ಗುರಿಯಾಗಿಸಿ ಪ್ರಯೋಗಿಸಿದ್ದ ಹಲವು ಕ್ಷಿಪಣಿಗಳನ್ನು ಪಾಕಿಸ್ತಾನದ ವಾಯು ಸುರಕ್ಷತಾ ವ್ಯವಸ್ಥೆಯು ನಿಷ್ಕ್ರಿಯಗೊಳಿಸಿದೆ ಎಂದು ಲೆಫ್ಟಿನಂಟ್ ಜನರಲ್ ಚೌಧರಿ ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.