ಡೊನಾಲ್ಡ್ ಟ್ರಂಪ್
ನ್ಯೂಯಾರ್ಕ್: ಭಾರತ ಮತ್ತು ಪಾಕಿಸ್ತಾನದ ಕದನ ವಿರಾಮಕ್ಕೆ ತಮ್ಮ ಸರ್ಕಾರದ ಪ್ರಯತ್ನವೇ ಕಾರಣ ಎಂದು ಪದೇ ಪದೇ ಹೇಳುತ್ತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅದು ‘ದೊಡ್ಡ ಯಶಸ್ಸು’ ಎಂದು ಶುಕ್ರವಾರ ಬಣ್ಣಿಸಿದ್ದಾರೆ.
‘ಅಲ್ಲಿ ಏನು ನಡೆಯಿತು (ಕದನ ವಿರಾಮ) ಎಂಬುದರ ಬಗ್ಗೆ ನಮಗೆ ತುಂಬಾ ಸಂತಸವಾಗಿದೆ. ಅದು ಮುಂದುವರಿಯಲಿದೆ ಎಂಬುದೇ ನನ್ನ ಭಾವನೆ. ನೆರೆಹೊರೆಯ ಎರಡು ದೇಶಗಳ ನಡುವಣ ಸಂಘರ್ಷದ ಮಟ್ಟವನ್ನು ನೋಡಿದಾಗ, ಕದನ ವಿರಾಮವನ್ನು ದೊಡ್ಡ ಯಶಸ್ಸು ಎಂಬುದಾಗಿ ಪರಿಗಣಿಸಬೇಕು’ ಎಂದು ಗಲ್ಫ್ ಭೇಟಿ ಕೊನೆಗೊಳಿಸಿ ವಾಷಿಂಗ್ಟನ್‌ಗೆ ಮರಳುವಾಗ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಮೇ 10 ರಂದು ಕದನ ವಿರಾಮಕ್ಕೆ ಒಪ್ಪಿಕೊಂಡಿತ್ತು. ಕದನ ವಿರಾಮಕ್ಕೆ ಅಮೆರಿಕವು ಮಧ್ಯಸ್ಥಿಕೆ ವಹಿಸಿತ್ತು ಎಂದು ಟ್ರಂಪ್ ಅವರು ಹೇಳಿಕೊಂಡಿರುವುದು ಇದೇ ಏಳನೇ ಬಾರಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.