ADVERTISEMENT

ಬಾಂಗ್ಲಾದೇಶದಲ್ಲಿ ಪರಸ್ಪರ ಕೈಕುಲುಕಿದ ಭಾರತ-ಪಾಕ್ ಸರ್ಕಾರದ ನಾಯಕರು

ಪಿಟಿಐ
Published 1 ಜನವರಿ 2026, 9:54 IST
Last Updated 1 ಜನವರಿ 2026, 9:54 IST
<div class="paragraphs"><p>ಎಸ್.ಜೈಶಂಕರ್,&nbsp;ಸರ್ದಾರ್ ಅಯಾಜ್ ಸಾದಿಕ್</p></div>

ಎಸ್.ಜೈಶಂಕರ್, ಸರ್ದಾರ್ ಅಯಾಜ್ ಸಾದಿಕ್

   

ಢಾಕಾ: ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರೊಂದಿಗೆ ಪಾಕಿಸ್ತಾನದ ರಾಷ್ಟ್ರೀಯ ಸಂಸತ್ತಿನ ಸ್ಪೀಕರ್ ಸರ್ದಾರ್ ಅಯಾಜ್ ಸಾದಿಕ್ ಸಂಕ್ಷಿಪ್ತ ಸಂವಾದ ನಡೆಸಿದ್ದಾರೆ ಎಂದು ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿ ಕಾರ್ಯಾಲಯ ತಿಳಿಸಿದೆ.

ADVERTISEMENT

'ಆಪರೇಷನ್ ಸಿಂಧೂರ' ಬಳಿಕ ಉಭಯ ದೇಶಗಳ ಉನ್ನತ ಮಟ್ಟದ ನಾಯಕರು ಇದೇ ಮೊದಲ ಬಾರಿಗೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಾಲಿದಾ ಜಿಯಾ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ವಿದೇಶಾಂಗ ಸಚಿವ ಎಸ್. ಜೈಶಂಕರ್ ಢಾಕಾಗೆ ತೆರಳಿದ್ದರು. ಅಲ್ಲಿ ಉಭಯ ರಾಷ್ಟ್ರಗಳ ನಾಯಕರ ಭೇಟಿ ನಡೆದಿದೆ.

ಪುಸ್ತಕದಲ್ಲಿ ಸಂತಾಪ ಉಲ್ಲೇಖಿಸುವ ಸಲುವಾಗಿ ಬಾಂಗ್ಲಾದೇಶದ ಸಂಸತ್ತಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿವಿಧ ದೇಶಗಳ ಸಮ್ಮಖದಲ್ಲಿ ಸಾದಿಕ್ ಅವರನ್ನು ಜೈಶಂಕರ್ ಅವರು ಭೇಟಿಯಾಗಿ ಕೈಕುಲುಕಿದರು ಎಂದು ಪಾಕ್‌ನ ನ್ಯಾಷನಲ್ ಅಸೆಂಬ್ಲಿ ಕಾರ್ಯಾಲಯ ಪ್ರಕಟಣೆ ತಿಳಿಸಿದೆ.

ಶಾಂತಿ ಮಾತುಕತೆಗೆ ಪಾಕಿಸ್ತಾನ ನಿರಂತರ ಒತ್ತು ನೀಡುತ್ತಿದೆ ಎಂದೂ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಕಳೆದ ವರ್ಷ ಮೇ ತಿಂಗಳಲ್ಲಿ ಭಾರತ 'ಆಪರೇಷರ್ ಸಿಂಧೂರ' ಕಾರ್ಯಾಚರಣೆಯನ್ನು ನಡೆಸಿತ್ತು. ಇದರಿಂದಾಗಿ ಉಭಯ ದೇಶಗಳ ನಡುವಣ ಬಾಂಧವ್ಯ ಸಂಪೂರ್ಣವಾಗಿ ಕಡಿದುಕೊಂಡಿತ್ತು.

ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್‌ ಯೂನಸ್ ಅವರ ಕಚೇರಿಯು ಸಾಮಾಜಿಕ ಮಾಧ್ಯಮದಲ್ಲಿ ಜೈಶಂಕರ್ ಹಾಗೂ ಸಾದಿಕ್ ಅವರ ಚಿತ್ರವನ್ನು ಹಂಚಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.