ADVERTISEMENT

ಭಾರತ – ಪಾಕ್‌ ಪರಮಾಣು ಯುದ್ಧವನ್ನು ತಪ್ಪಿಸಿದ್ದೇನೆ: ಮತ್ತೆ ಹೇಳಿದ ಟ್ರಂಪ್‌

ಪಿಟಿಐ
Published 27 ಆಗಸ್ಟ್ 2025, 6:53 IST
Last Updated 27 ಆಗಸ್ಟ್ 2025, 6:53 IST
<div class="paragraphs"><p>ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌</p></div>

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

   

ರಾಯಿಟರ್ಸ್‌ ಚಿತ್ರ

ವಾಷಿಂಗ್ಟನ್‌: ಭಾರತ ಹಾಗೂ ಪಾಕಿಸ್ತಾನ ನಡುವಣ ಸಂಘರ್ಷವು ʼಪರಮಾಣು ಯುದ್ಧʼವಾಗಿ ಸಂಭವಿಸುವ ಅಪಾಯವಿತ್ತು. ಕದನ ವಿರಾಮಕ್ಕೆ ಒಪ್ಪದಿದ್ದರೆ ಎಲ್ಲ ರೀತಿಯ ವ್ಯಾಪಾರ ಒಪ್ಪಂದಗಳನ್ನು ನಿರಾಕರಿಸುವುದಾಗಿ ಬೆದರಿಸುವ ಮೂಲಕ ಅದನ್ನು ತಡೆದಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಹೇಳಿದ್ದಾರೆ.

ADVERTISEMENT

ಶ್ವೇತಭವನದಲ್ಲಿ ಮಂಗಳವಾರ ನಡೆದ ಕ್ಯಾಬಿನೆಟ್‌ ಸಭೆಯಲ್ಲಿ ಮಾತನಾಡಿರುವ ಟ್ರಂಪ್‌, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿರುವುದಾಗಿಯೂ ತಿಳಿಸಿದ್ದಾರೆ.

'ನಾನು ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ್ದೇ. ನಿಮ್ಮ ಹಾಗೂ ಪಾಕಿಸ್ತಾನ ನಡುವೆ ಏನಾಗುತ್ತಿದೆ ಎಂದು ಪ್ರಶ್ನಿಸಿದ್ದೆ' ಎಂದಿರುವ ಅವರು, ಎರಡೂ ದೇಶಗಳ ನಡುವೆ ಬಹಳ ವರ್ಷಗಳಿಂದ ದ್ವೇಷವಿದೆ ಎಂದು ಹೇಳಿದ್ದಾರೆ.

'ನೀವು (ಭಾರತ, ಪಾಕಿಸ್ತಾನ) ಪರಮಾಣು ಯುದ್ದದಲ್ಲಿ ಅಂತ್ಯವಾಗಲಿದ್ದೀರಿ. ನಿಮ್ಮೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಬಯಸುವುದಿಲ್ಲ. ಇಲ್ಲವೇ, ನಿಮ್ಮ ತಲೆ ತಿರುಗುವಂತೆ ಹೆಚ್ಚುವರಿ ಸುಂಕ ವಿಧಿಸುತ್ತೇವೆ ಎಂದು ಹೇಳಿದ್ದೆ. ಐದು ಗಂಟೆಯಾಗುವುದರೊಳಗೆ ಸಂಘರ್ಷ ನಿಂತಿತ್ತು. ಬಹುಶಃ ಅದು ಮತ್ತೆ ಆರಂಭವಾಗಬಹುದು. ಹಾಗೇನಾದರೆ ಅದನ್ನು ನಿಲ್ಲಿಸುತ್ತೇನೆʼ ಎಂದಿದ್ದಾರೆ.

'ಏಳು ಅಥವಾ ಅದಕ್ಕಿಂತಲೂ ಹೆಚ್ಚು ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ' ಎಂದಿರುವ ಅವರು, ಅವು ಯಾವ ದೇಶದವು ಎಂಬುದನ್ನು ಸ್ಪಷ್ಟವಾಗಿ ಹೇಳಿಲ್ಲ.

ಭಾರತದಿಂದ ಆಮದಾಗುವ ಉತ್ಪನ್ನಗಳ ಮೇಲೆ ಆಗಸ್ಟ್ 27ರ ಮಧ್ಯರಾತ್ರಿಯಿಂದ (ಭಾರತೀಯ ಕಾಲಮಾನ ಆಗಸ್ಟ್‌ 28ರ ಬೆಳಿಗ್ಗೆ 9.31) ಹೆಚ್ಚುವರಿ ಶೇ 25 (ಒಟ್ಟು ಶೇ 50) ರಷ್ಟುನ ಸುಂಕ ಜಾರಿಯಾಗುವ ಕೆಲವೇ ಗಂಟೆಗಳ ಮುನ್ನ ಟ್ರಂಪ್‌ ಮಾತನಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಉಗ್ರರು ಏಪ್ರಿಲ್‌ 22 ರಂದು ನಡೆಸಿದ ಗುಂಡಿನ ದಾಳಿಯಲ್ಲಿ 26 ಪ್ರವಾಸಿಗರು ಹತ್ಯೆಯಾಗಿದ್ದರು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳ ಮೇಲೆ ಭಾರತೀಯ ಪಡೆಗಳು ಮೇ 7ರಂದು ದಾಳಿ ನಡೆಸಿದ್ದವು.

ಇದರ ಬೆನ್ನಲ್ಲೇ, ಭಾರತ ಮತ್ತು ಪಾಕಿಸ್ತಾನ ನಡುವಣ ಸಂಘರ್ಷ ಏರ್ಪಟ್ಟಿತ್ತು. ಆದರೆ, ಮೇ 10ರಂದು ಕದನ ವಿರಾಮ ಘೋಷಣೆಯಾಗಿತ್ತು. ಈ ಕುರಿತು, ಟ್ರಂಪ್‌ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಹಂಚಿಕೊಂಡಿದ್ದರು. ಬಳಿಕ, ಉಭಯ ದೇಶಗಳ ನಡುವೆ ಮಧ್ಯಸ್ಥಿಕೆ ವಹಿಸಿದ್ದಾಗಿ ಹಲವು ಬಾರಿ ಹೇಳಿಕೊಂಡಿದ್ದಾರೆ. ಆದರೆ, ಪ್ರಧಾನಿ ಮೋದಿ ಅವರು ಯಾವುದೇ ದೇಶ ಮಧ್ಯಸ್ಥಿಕೆ ವಹಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.