ADVERTISEMENT

ಮ್ಯಾನ್ಮಾರ್‌ಗೆ 10 ಲಕ್ಷ ಡೋಸ್‌ ಲಸಿಕೆ ನೀಡಿದ ಭಾರತ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2021, 11:12 IST
Last Updated 23 ಡಿಸೆಂಬರ್ 2021, 11:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನೈಪಿತಾವ್‌, ಮ್ಯಾನ್ಮಾರ್‌: ಭಾರತವು ನೆರೆಯ ರಾಷ್ಟ್ರವಾದ ಮ್ಯಾನ್ಮಾರ್‌ಗೆ ಹತ್ತು ಲಕ್ಷ ಡೋಸ್‌ ಕೋವಿಡ್‌ ಲಸಿಕೆ,ಹತ್ತು ಸಾವಿರ ಟನ್‌ ಅಕ್ಕಿ ಮತ್ತು ಗೋಧಿಯನ್ನು ಕಳುಹಿಸಿಕೊಟ್ಟಿದೆ.

ಮ್ಯಾನ್ಮಾರ್‌ಗೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್‌ ಶ್ರಿಂಗ್ಲಾ ಅವರು ಈ ವಿಷಯ ತಿಳಿಸಿದ್ದಾರೆ. ಭಾರತವು ಮಾನವೀಯ ನೆರವನ್ನು ಮುಂದುವರಿಸಿದ್ದು, ಅದರ ಭಾಗವಾಗಿ ನೆರವು ನೀಡಲಾಗಿದೆ ಎಂದಿದ್ದಾರೆ.

ಫೆಬ್ರುವರಿ 1ರಂದು ನಡೆದ ಸೇನಾ ದಂಗೆಯಲ್ಲಿಚುನಾಯಿತ ಸರ್ಕಾರವನ್ನು ಪದಚ್ಯುತಗೊಳಿಸಿ,ಆಂಗ್‌ ಸಾನ್‌ ಸೂಕಿ ಅವರನ್ನು ಬಂಧಿಸಿದ ಬಳಿಕ ಇದೇ ಮೊದಲ ಬಾರಿಗೆ ಭಾರತದ ಉನ್ನತ ಮಟ್ಟದ ನಿಯೋಗ ಮ್ಯಾನ್ಮಾರ್‌ಗೆ ಭೇಟಿ ನೀಡಿದೆ.

ಮ್ಯಾನ್ಮಾರ್‌ನ ರೆಡ್‌ಕ್ರಾಸ್‌ ಸೊಸೈಟಿಗೆ ಶ್ರಿಂಗ್ಲಾ ಅವರು ಬುಧವಾರ ಲಸಿಕೆಗಳನ್ನು ಹಸ್ತಾಂತರಿಸಿದರು.

‘ಭಾರತದೊಂದಿಗೆ ದೀರ್ಘವಾದ ಗಡಿಯನ್ನು ಹಂಚಿಕೊಂಡಿರುವ ಮ್ಯಾನ್ಮಾರ್‌ ಜನತೆಗೆ ಮಾನವೀಯ ನೆರವು ನೀಡುವುದನ್ನು ನಾವು ಮುಂದುವರಿಸುತ್ತೇವೆ. ಮ್ಯಾನ್ಮಾರ್‌ ಕೋವಿಡ್‌ ವಿರುದ್ಧ ಹೋರಾಡುತ್ತಿರುವುದರಿಂದ ಭಾರತದಲ್ಲಿ ತಯಾರಿಸಿದ 10 ಲಕ್ಷ ಡೋಸ್‌ ಲಸಿಕೆಗಳನ್ನು ಅಲ್ಲಿನ ರೆಡ್‌ಕ್ರಾಸ್‌ ಸೊಸೈಟಿಗೆಹಸ್ತಾಂತರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.