ADVERTISEMENT

ಮಾನವ ಹಕ್ಕುಗಳನ್ನು ಎತ್ತಿಹಿಡಿಯಿರಿ: ಭಾರತಕ್ಕೆ ಅಮೆರಿಕ ಆಗ್ರಹ

ಪಿಟಿಐ
Published 21 ಮಾರ್ಚ್ 2023, 13:31 IST
Last Updated 21 ಮಾರ್ಚ್ 2023, 13:31 IST
   

ವಾಷಿಂಗ್ಟನ್‌: ಮಾನವ ಹಕ್ಕುಗಳನ್ನು ಎತ್ತಿಹಿಡಿಯುವ ಹೊಣೆಗಾರಿಕೆ ಮತ್ತು ಬದ್ಧತೆಗಳನ್ನು ಭಾರತವು ತೋರಬೇಕು ಎಂದು ಬಲವಾಗಿ ಆಗ್ರಹಿಸುವುದಾಗಿ ಅಮೆರಿಕ ಹೇಳಿದೆ. ವಿವಿಧ ದೇಶಗಳ ಮಾನವ ಹಕ್ಕುಗಳ ಸ್ಥಿತಿಗತಿಗಳ ಕುರಿತ ‘ಕಂಟ್ರಿ ರಿಪೋರ್ಟ್ಸ್‌ 2022’ ಅನ್ನು ಅಮೆರಿಕ ಸೋಮವಾರ ಬಿಡುಗಡೆ ಮಾಡಿದೆ.

2022ರಲ್ಲಿ ಭಾರತದಲ್ಲಿ ಪ್ರಮುಖವಾದ ಮಾನವ ಹಕ್ಕು ಉಲ್ಲಂಘನೆಯ ಪ್ರಕರಣಗಳು ನಡೆದಿವೆ. ಇದರಲ್ಲಿ ಸ್ವೇಚ್ಛಾನುಸಾರ ಹತ್ಯೆ, ಪತ್ರಿಕಾ ಸ್ವಾತಂತ್ರ್ಯ ಹಾಗೂ ಖಾಸಗಿತನಕ್ಕೆ ಧಕ್ಕೆ, ಧಾರ್ಮಿಕ ಹಾಗೂ ಜನಾಂಗೀಯ ಅಲ್ಪಸಂಖ್ಯಾತರ ಮೇಲಿನ ಹಿಂಸೆಯು ಸೇರಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

‘ಅಮೆರಿಕದಲ್ಲಿರುವ ಭಾರತೀಯರು, ಭಾರತದಲ್ಲಿರುವ ಜನರನ್ನು ನಾವು ಮಾತನಾಡಿಸುತ್ತೇವೆ. ಅವರ ಅನುಭವ ಹಾಗೂ ದೃಷ್ಟಿಕೋನಗಳನ್ನು ಕೇಳಿ ತಿಳಿದುಕೊಳ್ಳುತ್ತೇವೆ. ಹೀಗೆ, ಭಾರತ ಸರ್ಕಾರವು ತಮ್ಮ ಜನರ ಮಾತನಾಡಿಸಬೇಕು ಎಂದು ಒತ್ತಾಯಿಸುತ್ತೇವೆ’ ಎಂದು ಪ್ರಜಾಪ್ರಭುತ್ವ, ಮಾನವಹಕ್ಕು ಹಾಗೂ ಕಾರ್ಮಿಕ ಇಲಾಖೆಯ ಪ್ರಭಾರಿ ಸಹಾಯಕ ಕಾರ್ಯದರ್ಶಿ ಎರಿಕ್‌ ಬಾರ್ಕ್ಲೆ ಹೇಳಿದರು.

ADVERTISEMENT

ವರದಿಯಲ್ಲೇನಿದೆ?

* ಸರ್ಕಾರ ಅಥವಾ ಅದರ ಏಜೆಂಟರಿಂದ ನ್ಯಾಯಾಂಗದಲ್ಲಿ ವಿಚಾರಣೆ ನಡೆಸದೆಯೇ ಹತ್ಯೆ ನಡೆಯುತ್ತಿದೆ. ಆರೋಪಿಗಳ ಹಾಗೂ ಕೈದಿಗಳ ಮೇಲೆ ಪೊಲೀಸರು ಹಾಗೂ ಜೈಲು ಅಧಿಕಾರಿಗಳಿಂದ ಅಮಾನವೀಯ ಹಾಗೂ ಕೀಳುಮಟ್ಟದ ನಡವಳಿಕೆ

* ಪತ್ರಕರ್ತರ ನ್ಯಾಯಸಮ್ಮತವಲ್ಲದ ಬಂಧನ ಹಾಗೂ ವಿಚಾರಣೆ. ಜೊತೆಗೆ ಕಾನೂನು ಕ್ರಮದ ಬೆದರಿಕೆ ಒಡ್ಡಿ ಪತ್ರಕರ್ತರ ಸ್ವಾತಂತ್ರ್ಯ ಹಗರಣ

* ಅಂತರ್ಜಾಲ ನಿರ್ಬಂಧ, ಪ್ರಜಾಸತ್ತಾತ್ಮಕ ಶಾಂತಿಯುತ ಹೋರಾಟಕ್ಕೆ ತಡೆ, ಸರ್ಕಾರದ ಮಟ್ಟದಲ್ಲಿ ನಡೆಯುತ್ತಿರುವ ಗಂಭೀರತರವಾದ ಭ್ರಷ್ಟಾಚಾರ. ಇದರೊಂದಿಗೆ ದೇಶದ ಹಾಗೂ ಅಂತರರಾಷ್ಟ್ರೀಯ ಮಟ್ಟದ ಮಾನವಹಕ್ಕು ಸಂಘಟನೆಗಳ ಮೇಲೆ ಹಿಂಸೆ

* ಸರ್ಕಾರದ ಎಲ್ಲಾ ಹಂತಗಳಲ್ಲೂ ಕಂಡುಬಂದ ದುರ್ನಡತೆಯ ಕುರಿತು ಉತ್ತರದಾಯಿತ್ವದ ಕೊರತೆ. ಇದರಿಂದಾಗಿ ದುರ್ನಡತೆ ತೋರಿದವರಿಗೆ ವ್ಯಾಪಕ ರಕ್ಷಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.