ADVERTISEMENT

ಅಪರೂಪದ ಖನಿಜ, ಇಂಧನ, ಪರಮಾಣು, ರಕ್ಷಣೆ ಕುರಿತು ಭಾರತ-ಅಮೆರಿಕ ಚರ್ಚೆ

ಪಿಟಿಐ
Published 4 ಫೆಬ್ರುವರಿ 2026, 5:41 IST
Last Updated 4 ಫೆಬ್ರುವರಿ 2026, 5:41 IST
<div class="paragraphs"><p>ಎಸ್‌.ಜೈಂಶಕರ್, ಮಾರ್ಕೊ ರೂಬಿಯೊ</p></div>

ಎಸ್‌.ಜೈಂಶಕರ್, ಮಾರ್ಕೊ ರೂಬಿಯೊ

   

ನ್ಯೂಯಾರ್ಕ್/ವಾಷಿಂಗ್ಟನ್: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.

ಉಭಯ ದೇಶಗಳ ನಾಯಕರು ಭಾರತ ಮತ್ತು ಅಮೆರಿಕ ನಡುವಣ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಸ್ವಾಗತಿಸಿದ್ದಾರೆ. ಅಪರೂಪದ ಖನಿಜ ಸಂಶೋಧನೆ, ಗಣಿಗಾರಿಕೆಯಲ್ಲಿ ದ್ವಿಪಕ್ಷೀಯ ಸಹಕಾರವನ್ನು ಔಪಚಾರಿಕಗೊಳಿಸುವ ಕುರಿತಾಗಿಯೂ ಮಾತುಕತೆ ನಡೆಸಲಾಯಿತು.

ADVERTISEMENT

ವ್ಯಾಪಾರ, ಇಂಧನ, ಪರಮಾಣು, ರಕ್ಷಣೆ, ಅಪರೂಪದ ಖನಿಜ ಮತ್ತು ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳ ಪಾಲುದಾರಿಕೆಯ ಕುರಿತಾಗಿಯೂ ಚರ್ಚೆ ನಡೆದಿದೆ.

ಮಾರ್ಕೊ ರೂಬಿಯೊ ನೇತೃತ್ವದಲ್ಲಿ ಅಪರೂಪದ ಖನಿಜ ಪೂರೈಕೆ ಸರಪಳಿ ಕುರಿತು ಸಭೆ ನಡೆಸಲಾಗಿದೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಜೈಶಂಕರ್, 'ದ್ವಿಪಕ್ಷೀಯ ಸಹಕಾರದ ಕಾರ್ಯಸೂಚಿ, ಪ್ರಾದೇಶಿಕ ಹಾಗೂ ಜಾಗತಿಕ ಸಮಸ್ಯೆಗಳ ಬಗ್ಗೆ ಚರ್ಚೆ ಸೇರಿದಂತೆ ಸಮಗ್ರ ಮಾತುಕತೆ ನಡೆಸಲಾಯಿತು ಎಂದು ಹೇಳಿದ್ದಾರೆ. ಸಮಾನ ಹಂಚಿಕೆಯ ಕಾರ್ಯಸೂಚಿಯನ್ನು ಮುನ್ನಡೆಸಲು ಪ್ರಾರಂಭಿಕ ಮಾತುಕತೆಗೆ ಪರಸ್ಪರ ಒಪ್ಪಿಗೆ ಸೂಚಿಸಲಾಯಿತು' ಎಂದಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಣ ಮಾತುಕತೆಯ ಬಳಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಅಂತಿಮಗೊಳಿಸಲಾಯಿತು. ಈ ಮೂಲಕ ನವ ಆರ್ಥಿಕ ಅವಕಾಶಗಳನ್ನು ತೆರೆದುಕೊಳ್ಳಲು ಮತ್ತು ಇಂಧನ ಭದ್ರತೆಯ ಗುರಿಯತ್ತ ಒಟ್ಟಾಗಿ ಸಾಗಲು ಒಗ್ಗಟ್ಟಾಗಿ ಕೆಲಸ ಮಾಡುವ ಮಹತ್ವವನ್ನು ಒತ್ತಿ ಹೇಳಿದ್ದಾರೆ.

ಜೈಶಂಕರ್ ಮೂರು ದಿನಗಳ (ಫೆ.2ರಿಂದ 5) ಅಮೆರಿಕ ಪ್ರವಾಸ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಮಾರ್ಕೊ ರೂಬಿಯೊ ಸೇರಿದಂತೆ ಅಮೆರಿಕದ ಉನ್ನತ ಅಧಿಕಾರಿಗಳ ಜೊತೆಗೂ ಸಭೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.