ADVERTISEMENT

India–Canada Conflict | 41 ರಾಜತಾಂತ್ರಿಕರು ಭಾರತದಿಂದ ವಾಪಸ್: ಕೆನಡಾ

ರಾಯಿಟರ್ಸ್
Published 20 ಅಕ್ಟೋಬರ್ 2023, 4:46 IST
Last Updated 20 ಅಕ್ಟೋಬರ್ 2023, 4:46 IST
<div class="paragraphs"><p>ಕೆನಡಾ ಮತ್ತು ಭಾರತದ ಧ್ವಜ</p></div>

ಕೆನಡಾ ಮತ್ತು ಭಾರತದ ಧ್ವಜ

   

ಐಸ್ಟಾಕ್ ಚಿತ್ರ

ಒಟ್ಟಾವ (ಕೆನಡಾ): 62 ರಾಜತಾಂತ್ರಿಕ ಅಧಿಕಾರಿಗಳ ಪೈಕಿ 41 ಮಂದಿಯನ್ನು ಭಾರತದಿಂದ ವಾಪಸ್‌ ಕರೆಸಿಕೊಳ್ಳಲಾಗಿದೆ ಎಂದು ಕೆನಡಾ ವಿದೇಶಾಂಗ ಸಚಿವೆ ಮೆಲಾನಿಯೆ ಜಾಲಿ ಹೇಳಿದ್ದಾರೆ.

ADVERTISEMENT

ಖಾಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ವಿಚಾರವಾಗಿ ಉಂಟಾಗಿರುವ ಬಿಕ್ಕಟ್ಟಿನ ನಡುವೆ ಹೆಚ್ಚಿನ ಸಂಖ್ಯೆಯ ರಾಜತಾಂತ್ರಿಕರು ವಾಪಸ್‌ ಆಗಿದ್ದಾರೆ ಎಂದು 'ಕೆನಡಿಯನ್‌ ಬ್ರಾಡ್‌ಕಾಸ್ಟಿಂಗ್‌ ಕಾರ್ಪೊರೇಷನ್‌' ಗುರುವಾರ ವರದಿ ಮಾಡಿದೆ.

ನಿಜ್ಜರ್‌ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ ಆರೋಪಿಸಿದ್ದರು. ಅದಾದ ಬಳಿಕ ಉಭಯ ರಾಷ್ಟ್ರಗಳ ಸಂಬಂಧ ಹಳಸಿದೆ. 

ಉಭಯ ದೇಶಗಳು ಸಮಾನ ಸಂಖ್ಯೆಯಲ್ಲಿ ರಾಜತಾಂತ್ರಿಕ ಸಿಬ್ಬಂದಿಯನ್ನು ಹೊಂದಿರುವುದು ಅಗತ್ಯ ಎಂದು ಕಳೆದ ತಿಂಗಳು ಪ್ರತಿಪಾದಿಸಿದ್ದ ಭಾರತ, ಹೆಚ್ಚುವರಿ ರಾಜತಾಂತ್ರಿಕರನ್ನು ಅಕ್ಟೋಬರ್‌ 10ರೊಳಗೆ ವಾಪಸ್‌ ಕರೆಸಿಕೊಳ್ಳಬೇಕು ಎಂದು ಕೆನಡಾಗೆ ಸೂಚಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.