ವಾಷಿಂಗ್ಟನ್: ನಿರ್ಬಂಧದ ಮೂಲಕ ಅಮೆರಿಕದ ಶತ್ರುಗಳನ್ನು ಎದುರಿಸುವ ಕಾಯ್ದೆ (ಸಿಎಎಟಿಎಸ್‌ಎ) ಅನ್ವಯ ಭಾರತದ ಮೇಲೆ ನಿರ್ಬಂಧ ಹೇರಬಾರದು ಎಂದು ಕೋರಿ ಭಾರತ ಮೂಲದ ಅಮೆರಿಕ ಸಂಸದ ರೋ ಖನ್ನಾ ಅವರು ಸ್ವತಂತ್ರ ಮಸೂದೆಯನ್ನು ಮಂಡಿಸಿದ್ದಾರೆ.
ಪ್ರಮುಖ ರಕ್ಷಣಾ ಸಾಮಗ್ರಿಗಳನ್ನು ರಷ್ಯಾದಿಂದ ಖರೀದಿಸುವ ದೇಶಗಳ ಮೇಲೆ ಅಮೆರಿಕವು ಸಿಎಎಟಿಎಸ್‌ಎ ಅನ್ವಯ ನಿರ್ಬಂಧ ಹೇರಬಹುದಾಗಿದೆ. ಭಾರತವು ರಷ್ಯಾದಿಂದ ಕೆಲವು ಶಸ್ತಾಸ್ತ್ರಗಳನ್ನು ಖರೀದಿಸುತ್ತಿದೆ. ಅದಕ್ಕಾಗಿ ಭಾರತದ ಮೇಲೆ ನಿರ್ಬಂಧ ಹೇರಬಾರದು. ಇದು ಭಾರತ–ಅಮೆರಿಕದ ರಕ್ಷಣಾ ಪಾಲುದಾರಿಕೆ ಹಿತಾಸಕ್ತಿಗೆ ಉತ್ತಮವಾದುದು ಎಂದು ರೋ ಖನ್ನಾ ಹೇಳಿದ್ದಾರೆ. ಇವರ ಈ ಮಸೂದೆಯನ್ನು ಇನ್ನೂ ಕೆಲವು ಸಂಸದರು ಬೆಂಬಲಿಸಿದ್ದಾರೆ.
ರಾಷ್ಟ್ರೀಯ ರಕ್ಷಣಾ ಅಧಿಕಾರ ಕಾಯ್ದೆಗೂ (ಎನ್‌ಡಿಎಎ) ತಿದ್ದುಪಡಿ ತರುವಂತೆ ಕೋರಿ ಖನ್ನಾ ಅವರು ಮಸೂದೆ ಮಂಡಿಸಿದ್ದರು. ಇದಕ್ಕೆ ಸೆನೆಟ್ ಒಪ್ಪಿಗೆ ಸೂಚಿಸಿದೆ. ರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿಸುತ್ತಿರುವುದಕ್ಕೆ ಸಿಎಎಟಿಎಸ್‌ಎ ಅನ್ವಯ ಭಾರತದ ಮೇಲೆ ನಿರ್ಬಂಧ ಹೇರುವ ಕುರಿತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಇನ್ನೂ ಯಾವ ನಿರ್ಧಾರವನ್ನೂ ಕೈಗೊಂಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.