ADVERTISEMENT

400 ದಿನ, 43 ದೇಶ, 1 ಲಕ್ಷ ಕಿಲೋ ಮೀಟರ್‌ ಸಂಚರಿಸಿದ ದಂಪತಿ... ಕಾರಣ ಏನು ಗೊತ್ತೇ?

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 11:42 IST
Last Updated 18 ಜನವರಿ 2020, 11:42 IST
ಅನಿಲ್‌ ಶ್ರೀವಸ್ತ ಮತ್ತು ದೀಪಾಲಿ– ಪೇಸ್‌ಬುಕ್‌ ಚಿತ್ರ
ಅನಿಲ್‌ ಶ್ರೀವಸ್ತ ಮತ್ತು ದೀಪಾಲಿ– ಪೇಸ್‌ಬುಕ್‌ ಚಿತ್ರ    

ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕ ಉದ್ಯಮಿಯೊಬ್ಬರು ತಮ್ಮ ಪತ್ನಿಯೊಂದಿಗೆ 400 ದಿನಗಳ ಕಾಲ ರಸ್ತೆಯ ಮೇಲೆಯೇ ಸಂಚರಿಸಿದ್ದಾರೆ.ಅಂಗ ದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು 43 ದೇಶಗಳನ್ನು ಸುತ್ತಿರುವ ಅನಿಲ್‌ ಶ್ರೀವಸ್ತ ಮತ್ತು ದೀಪಾಲಿ ದಂಪತಿ ತಮ್ಮ ಕಾರಿನಲ್ಲಿ 1 ಲಕ್ಷ ಕಿಲೋ ಮೀಟರ್‌ ದೂರ ಪ್ರಯಾಣ ಮಾಡಿದ್ದಾರೆ.

2014ರಲ್ಲಿ ತಮ್ಮ ಸಹೋದರನಿಗೆ ಕಿಡ್ನಿ ದಾನ ಮಾಡಿದ ನಂತರ ಅನಿಲ್‌ ಶ್ರೀವಸ್ತ ಅವರು ಜಗತ್ತಿನಾದ್ಯಂತ ಅಂಗ ದಾನ ಜಾಗೃತಿ ಮೂಡಿಸುವಸಲುವಾಗಿ ಖಂಡಾಂತರ ಯಾತ್ರೆಗಳನ್ನು ಕೈಗೊಂಡರು. ‘ಗಿಪ್ಟ್‌ ಆಫ್‌ ಲೈಫ್‌ ಅಡ್ವೆಂಚರ್‌’ಹೆಸರಿನ ಚಾರಿಟಬಲ್ ಫೌಂಡೇಶನ್ ಮೂಲಕ ಈವರೆಗೆ43 ದೇಶಗಳನ್ನು ಸುತ್ತಿದ್ದಾರೆ. ಅನಿಲ್‌ ಶ್ರೀವಸ್ತ ಅವರಿಗೆ ಪತ್ನಿ ದೀಪಾಲಿ ಜೊತೆಯಾಗಿದ್ದಾರೆ.

ಈ ಬಗ್ಗೆ ವಿದೇಶಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಅನಿಲ್‌, ‘ನಾನು ನನ್ನ ಸಹೋದರನಿಗೆ ಏನು ಮಾಡಿದ್ದೇನೋ ಅದಕ್ಕೆ ಪ್ರೀತಿಯೇ ಮೂಲವಾಗಿದೆ. ನನ್ನ ಅಭಿಪ್ರಾಯದಲ್ಲಿ, ಯಾರಾದರೂ ತಮ್ಮ ಅಂಗವನ್ನು ದಾನ ಮಾಡಬೇಕೆಂದರೆ, ಅದಕ್ಕೆ ಪ್ರೀತಿಯೇ ಕಾರಣವಾಗುತ್ತದೆ’ಎಂದು ಹೇಳಿದ್ದಾರೆ.

ADVERTISEMENT

1 ಲಕ್ಷ ಕಿ.ಮೀ ದೂರ ಕ್ರಮಿಸಿರುವ ಅನಿಲ್‌ ದಂಪತಿ ಇಲ್ಲಿಯರೆಗೆ73 ಸಾವಿರ ಜನರನ್ನು ಭೇಟಿಯಾಗಿ ಅಂಗ ದಾನದ ಬಗ್ಗೆ ಅರಿವು ಮೂಡಿಸಿದ್ದಾರೆ. ಇನ್ನು ಮುಂದೆಯೂ ಇದೇ ಕಾರ್ಯದಲ್ಲಿ ನಿರತರಾಗುವುದಾಗಿ ಹೇಳಿದ್ದಾರೆ.

ಪರ್ಯಟನೆ ವೇಳೆ, ಜನರು ಬೆಚ್ಚಗಿನ ಹಾಸಿಗೆ ಅಥವಾ ಬಿಸಿ ಆಹಾರ ನೀಡದಿದ್ದ ಸಂದರ್ಭದಲ್ಲಿ ತಮ್ಮ ಕಾರಿನಲ್ಲೇ ಮಲಗಿ, ಅಡುಗೆ ಮಾಡಿಕೊಳ್ಳುವುದುಅನಿವಾರ್ಯವಾಗಿತ್ತು. ಇದು ನಮ್ಮ ಬದುಕನ್ನು ಸಾಹಸಮಯವಾಗಿಸಿತ್ತುಎಂದು ಅನಿಲ್‌ ಶ್ರೀವಸ್ತ ತಿಳಿಸಿದ್ದಾರೆ.

ಸಾವಿರಾರು ಶಾಲೆ, ಕಾಲೇಜು, ರೋಟರಿ ಸಂಸ್ಥೆ, ಸಮುದಾಯ ಕೇಂದ್ರ ಮತ್ತು ಕಚೇರಿಗಳನ್ನು ಭೇಟಿ ಮಾಡಿ ಅಂಗಾಂಗ ದಾನದ ಬಗ್ಗೆ ಜನರಲ್ಲಿರುವ ತಪ್ಪು ತಿಳುವಳಿಕೆಯ ಕುರಿತು ಅನಿಲ್‌ ಅರಿವು ಮೂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.