ADVERTISEMENT

ಭಾರತ ಮೂಲದ ಬಾಲಕ ವಿಶ್ವ ಚಾಂಪಿಯನ್‌

ಜರ್ಮನಿಯಲ್ಲಿ ನಡೆದ ಕಿರಿಯರ ವಿಭಾಗದ ಜಿಯಾಗ್ರಫಿ ಬೀ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2018, 19:16 IST
Last Updated 9 ಆಗಸ್ಟ್ 2018, 19:16 IST

ಹ್ಯೂಸ್ಟನ್ (ಪಿಟಿಐ): ಭಾರತ ಮೂಲದ ಅವಿ ಗೋಯಲ್,ಅಂತರರಾಷ್ಟ್ರೀಯ ಜಿಯಾಗ್ರಫಿ (ಭೂಗೋಳ) ಬೀ ಕಿರಿಯರ ವಿಭಾಗದ ಸ್ಪರ್ಧೆಯಲ್ಲಿ ವಿಶ್ವ ಚಾಂಪಿಯನ್‌ ಆಗಿದ್ದಾನೆ. ಜರ್ಮನಿಯ ಬರ್ಲಿನ್‌ನಲ್ಲಿ ಕಳೆದ ತಿಂಗಳು ನಡೆದಿದ್ದ ಈ ಸ್ಪರ್ಧೆಯಲ್ಲಿ, ವಿಶ್ವದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

14 ವರ್ಷದ ಅವಿ, ಸ್ಯಾನ್‌ ಜೋಸ್‌ನ ಸಿಲ್ವರ್ ಕ್ರೀಕ್ ಹೈಸ್ಕೂಲ್‌ನಲ್ಲಿ 10ನೇ ತರಗತಿ ವಿದ್ಯಾರ್ಥಿ.

ಜಾಗತಿಕ ಮಟ್ಟದ ಸಂಸ್ಥೆಯಾಗಿರುವ ‘ಇಂಟರ್‌ನ್ಯಾಷನಲ್ ಅಕಾಡೆಮಿಕ್ ಕಾಂಪಿಟಿಷನ್ಸ್‌’ ನಡೆಸುವ ಸ್ಪರ್ಧೆಯಲ್ಲಿ ಭೂಗೋಳದ ಇತಿಹಾಸ, ಭೌತಿಕ ಆಯಾಮ ಹಾಗೂ ವಾಯುಗುಣದ ಜ್ಞಾನ ಪರೀಕ್ಷಿಸಲು ಪ್ರಶ್ನೋತ್ತರ ಸೇರಿದಂತೆ ವಿವಿಧ ರೀತಿಯಪರೀಕ್ಷೆಗಳನ್ನು ನಡೆಸಲಾಗುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.