ADVERTISEMENT

ನಾಲ್ವರ ಹತ್ಯೆ: ಶರಣಾದ ಭಾರತ ಮೂಲದ ಟೆಕಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2019, 19:53 IST
Last Updated 16 ಅಕ್ಟೋಬರ್ 2019, 19:53 IST
ಶಂಕರ ಹನಗೂಡ
ಶಂಕರ ಹನಗೂಡ   

ಸ್ಯಾನ್‌ ಫ್ರಾನ್ಸಿಸ್ಕೊ: ಭಾರತ ಮೂಲದ ಐ.ಟಿ ಉದ್ಯೋಗಿಯೊಬ್ಬರು ತಾನು ಹತ್ಯೆ ಮಾಡಿದ ವ್ಯಕ್ತಿಯ ಶವವನ್ನು ಕಾರಿನಲ್ಲಿಟ್ಟುಕೊಂಡು, ಉತ್ತರ ಕ್ಯಾಲಿಫೋರ್ನಿಯಾ ಪೊಲೀಸ್‌ ಠಾಣೆಯಲ್ಲಿ ಶರಣಾದ ಘಟನೆ ನಡೆದಿದೆ.

‘ತಾನಿರುವ ಅಪಾರ್ಟ್‌ಮೆಂಟ್‌ನಲ್ಲಿ ಇತರ ಮೂವರನ್ನು ಕೂಡ ಕೊಂದಿರುವೆ ಎಂದು ಆತ ತಪ್ಪೊಪ್ಪಿಕೊಂಡಿದ್ದಾಗಿ’ ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.

ಶಂಕರ ನಾಗಪ್ಪ ಹನಗೂಡ, ಕೊಲೆ ಮಾಡಿ ಪೊಲೀಸರಿಗೆ ಶರಣಾಗಿರುವ ವ್ಯಕ್ತಿ.

ADVERTISEMENT

‘ಹತ್ಯೆಗೀಡಾದ ನಾಲ್ಕು ಜನರೂ ಆರೋಪಿ ಹನಗೂಡ ಕುಟುಂಬಕ್ಕೆ ಸೇರಿದವರು. ಈ ಪೈಕಿ ಇಬ್ಬರು ಚಿಕ್ಕವರಿದ್ದಾರೆ’ ಎಂದು ರೋಸ್‌ವಿಲ್ಲೆ ಪೊಲೀಸ್‌ ಠಾಣೆ ಅಧಿಕಾರಿ ಜೋಶುವಾ ಸೈಮನ್‌ ಹೇಳಿದ್ದಾರೆ. ‘ಶಂಕರ ವಾಸವಿರುವ ಅಪಾರ್ಟ್‌ಮೆಂಟ್‌ನಲ್ಲಿ ಇತರ ಮೂವರ ಶವಗಳನ್ನು ಪತ್ತೆ ಮಾಡಿದ್ದೇವೆ. ಕೆಲವು ದಿನಗಳ ಹಿಂದೆಯೇ ಅವರನ್ನು ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ’ ಎಂದೂ ಅವರು ಹೇಳಿದ್ದಾರೆ.

ಶಂಕರ ಅವರು ಡಾಟಾ ಅನಾಲಿಸ್ಟ್‌ ಆಗಿದ್ದು, ಸಾಕ್ರಮೆಂಟೊ ಪ್ರದೇಶದಲ್ಲಿರುವ ಹಲವಾರು ಕಂಪನಿಗಳಲ್ಲಿ ಕಾರ್ಯ ನಿರ್ವಹಿಸಿರುವುದು ಅವರ ಲಿಂಕ್ಡ್‌ಇನ್‌ ಖಾತೆಯಿಂದ ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.