ADVERTISEMENT

ಅಧ್ಯಕ್ಷೀಯ ಚುನಾವಣೆ | ಟ್ರಂಪ್‌ ಪ್ರಚಾರಕ್ಕೆ ಭಾರತ ಮೂಲದ ಅಮೆರಿಕನ್ನರ ಸಮಿತಿ

ಪಿಟಿಐ
Published 30 ಜೂನ್ 2020, 11:03 IST
Last Updated 30 ಜೂನ್ 2020, 11:03 IST
ಟ್ರಂಪ್‌
ಟ್ರಂಪ್‌   

ವಾಷಿಂಗ್ಟನ್‌: ಭಾರತೀಯ ಮೂಲದ ಕೆಲವು ಅಮೆರಿಕನ್ನರು, ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಚುನಾವಣಾ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಉದ್ದೇಶದಿಂದ ‘ಟ್ರಂಪ್‌ಗಾಗಿ ಭಾರತೀಯ ಅಮೆರಿಕನ್ನರು’ ಎಂಬ ರಾಜಕೀಯ ಕ್ರಿಯಾ ಸಮಿತಿಯೊಂದನ್ನು ರಚಿಸಿದ್ದಾರೆ.

‘ಭಯೋತ್ಪಾದನೆ ನಿಗ್ರಹ, ವಲಸೆ ನಿಯಂತ್ರಣ ಸೇರಿದಂತೆ ಪ್ರಸ್ತುತ ಆಂತರಿಕ ಹಾಗೂ ಅಂತರರಾಷ್ಟ್ರೀಯ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ನೋಡಿದರೆ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಟ್ರಂಪ್‌ ಅವರು ಹೆಚ್ಚು ಅರ್ಹ ವ್ಯಕ್ತಿಯಾಗಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ಟ್ರಂಪ್‌ ಅವರು ತಮ್ಮ ಮೊದಲ ಅವಧಿಯಲ್ಲಿ ದೇಶದ ಅರ್ಥವ್ಯವಸ್ಥೆಗೆ ಪುನಶ್ಚೇತನ ನೀಡುವ ಕೆಲಸ ಮಾಡಿದ್ದಾರೆ. ಅಮೆರಿಕವನ್ನು ಜಾಗತಿಕ ವೇದಿಕೆಗೆ ತರುವ, ಭಯೋತ್ಪಾದನೆಯನ್ನು ತಡೆಯುವ, ವಲಸೆಯನ್ನು ನಿಯಂತ್ರಿಸುವ ಮತ್ತು ಶಾಂತಿ ಸ್ಥಾಪಿಸುವ ಕಡೆಗೆ ಗಮನ ಹರಿಸಿರುವುದು ಕಂಡುಬರುತ್ತದೆ’ ಎಂದು ವೇದಿಕೆಯ ಸಂಸ್ಥಾಪಕ ಎ.ಡಿ. ಅಮರ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಮರ್‌ ಅವರು 2016ರಲ್ಲೂ ಇಂಥ ಕ್ರಿಯಾ ಸಮಿತಿಯನ್ನು ರಚಿಸಿ ಟ್ರಂಪ್‌ ಪರವಾಗಿ ಪ್ರಚಾರ ನಡೆಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.