ADVERTISEMENT

ಕೆನಡಾದಲ್ಲಿ ವಿಮಾನ ಅಪಘಾತ: ಭಾರತೀಯ ಸಾವು

ಪಿಟಿಐ
Published 29 ಜುಲೈ 2025, 14:33 IST
Last Updated 29 ಜುಲೈ 2025, 14:33 IST
.
.   

ಒಟ್ಟಾವಾ: ಪೂರ್ವ ಕೆನಡಾದ ಡೀರ್ ಲೇಕ್ ಬಳಿ ನಡೆದ ಸಣ್ಣ ವಿಮಾನ ಅಪಘಾತದಲ್ಲಿ ಭಾರತೀಯರೊಬ್ಬರು ಮೃತಪಟ್ಟಿದ್ದಾರೆ ಎಂದು ಟೊರೊಂಟೊದಲ್ಲಿನ ಭಾರತೀಯ ರಾಯಭಾರ ಕಚೇರಿ ಮಂಗಳವಾರ ತಿಳಿಸಿದೆ.

ಡೀರ್‌ ಲೇಕ್‌ ಪ್ರಾದೇಶಿಕ ವಿಮಾನ ನಿಲ್ದಾಣದಿಂದ ಶನಿವಾರ ಸಂಜೆ ಹಾರಾಟ ಆರಂಭಿಸಿದ ಸ್ವಲ್ಪ ಸಮಯದಲ್ಲೇ ವಿಮಾನ ಅಪಘಾತಕ್ಕೀಡಾಗಿದೆ ಎಂದು ಸಿಬಿಸಿ ನ್ಯೂಸ್‌ ವರದಿ ಮಾಡಿದೆ. ವಿಮಾನದಲ್ಲಿದ್ದ ಇಬ್ಬರೂ ಮೃತಪಟ್ಟಿದ್ದಾರೆ.

‘ನ್ಯೂಫೌಂಡ್‌ಲೆಂಡ್‌ನ ಡೀರ್‌ ಲೇಕ್‌ ಬಳಿ ವಿಮಾನ ಪತನಕ್ಕೀಡಾಗಿದ್ದು, ಇದರಲ್ಲಿದ್ದ ಭಾರತೀಯ ಪ್ರಜೆ ಗೌತಮ್‌ ಸಂತೋಷ್‌ ಮೃತಪಟ್ಟಿದ್ದಾರೆ. ಅವರ ಕುಟುಂಬಕ್ಕೆ ಎಲ್ಲ ಅಗತ್ಯ ನೆರವು ಒದಗಿಸಲು ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ’ ಎಂದು ರಾಯಭಾರ ಕಚೇರಿ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.