ADVERTISEMENT

ಭಾರತೀಯನ ಮೃತದೇಹ ಪತ್ತೆ

ಪಿಟಿಐ
Published 29 ಡಿಸೆಂಬರ್ 2019, 22:38 IST
Last Updated 29 ಡಿಸೆಂಬರ್ 2019, 22:38 IST

ದುಬೈ: ಶಾರ್ಜಾದ ಹೋಟೆಲ್‌ ಕೋಣೆಯೊಂದರಲ್ಲಿ 33 ವರ್ಷದ ಭಾರತೀಯ ವ್ಯಕ್ತಿಯೊಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಗಲ್ಫ್‌ ನ್ಯೂಸ್‌ ಭಾನುವಾರ ವರದಿ ಮಾಡಿದೆ.

ಮೃತ ವ್ಯಕ್ತಿಯು ಒಂದು ರಾತ್ರಿಗೆ ಕೊಠಡಿಯನ್ನು ಬಾಡಿಗೆಗೆ ಪಡೆದಿದ್ದರು. ಸಮಯ ಮುಗಿದ ನಂತರ, ಸಿಬ್ಬಂದಿ ಅವರನ್ನು ಕರೆಯಲು ಕೊಠಡಿಗೆ ತೆರಳಿದ್ದರು. ಬಾಗಿಲು ತೆರೆದಾಗ ಸ್ನಾನದ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ದೇಹ ಕಾಣಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT