ADVERTISEMENT

ಮ್ಯಾನ್‌ಹ್ಯಾಟನ್‌ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ: ಭಾರತ ಮೂಲದ ಯುವಕ ಸಾವು

ಪಿಟಿಐ
Published 25 ಫೆಬ್ರುವರಿ 2024, 5:05 IST
Last Updated 25 ಫೆಬ್ರುವರಿ 2024, 5:05 IST
<div class="paragraphs"><p>ಫಾಜಿಲ್ ಖಾನ್</p></div>

ಫಾಜಿಲ್ ಖಾನ್

   

ನ್ಯೂಯಾರ್ಕ್: ಇಲ್ಲಿನ ಮ್ಯಾನ್‌ಹ್ಯಾಟನ್‌ನ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಭಾರತ ಮೂಲದ 27 ವರ್ಷದ ಫಾಜಿಲ್ ಖಾನ್ ಮೃತಪಟ್ಟಿದ್ದು, 17 ಮಂದಿ ಗಾಯಗೊಂಡಿದ್ದಾರೆ.

ಫಾಜಿಲ್ ಖಾನ್ ಅವರು ನ್ಯೂಯಾರ್ಕ್ ಮೂಲದ ಮಾಧ್ಯಮ ಕಂಪನಿ ‘ದಿ ಹೆಚಿಂಗರ್’ನಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಅವರು ಫಾಜಿಲ್ ಖಾನ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಲಿಥಿಯಂ– ಐಯಾನ್ ಬ್ಯಾಟರಿಯಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.