ADVERTISEMENT

ಆಸ್ಟ್ರೇಲಿಯಾ–ಭಾರತ ಸಂಬಂಧಗಳ ಕೇಂದ್ರಕ್ಕೆ ಭಾರತ ಮೂಲದ ಸ್ವಾತಿ ನೇಮಕ

ಪಿಟಿಐ
Published 7 ಫೆಬ್ರುವರಿ 2023, 10:30 IST
Last Updated 7 ಫೆಬ್ರುವರಿ 2023, 10:30 IST
-
-   

ಮೆಲ್ಬರ್ನ್: ಭಾರತ ಮೂಲದ ಹಿರಿಯ ಬ್ಯಾಂಕಿಂಗ್‌ ತಜ್ಞೆ ಸ್ವಾತಿ ದವೆ ಅವರನ್ನು ‘ಆಸ್ಟ್ರೇಲಿಯಾ–ಭಾರತ ಸಂಬಂಧಗಳ ಕೇಂದ್ರ’ದ ಸಲಹಾ ಮಂಡಳಿಯ ಮುಖ್ಯಸ್ಥೆಯನ್ನಾಗಿ ಮಂಗಳವಾರ ನೇಮಕ ಮಾಡಲಾಗಿದೆ.

ಆಸ್ಟ್ರೇಲಿಯಾ ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಅವರು ಸ್ವಾತಿ ದವೆ ಅವರ ನೇಮಕವನ್ನು ಘೋಷಿಸಿದ್ದಾರೆ.

ಉಭಯ ದೇಶಗಳ ನಡುವಿನ ಸಾಂಸ್ಕೃತಿಕ ಹಾಗೂ ವಾಣಿಜ್ಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದೊಂದಿಗೆ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ಕೇಂದ್ರವನ್ನು ಇದೇ ವರ್ಷ ಉದ್ಘಾಟಿಸಲಾಗುವುದು ಎಂದು ವಾಂಗ್‌ ಹೇಳಿದ್ದಾರೆ.

ADVERTISEMENT

ಸ್ವಾತಿ ಅವರು ಪ್ರಸ್ತುತ ‘ಏಷ್ಯಾ ಸೊಸೈಟಿ ಆಸ್ಟ್ರೇಲಿಯಾ’ದ ಉಪ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ನ್ಯಾಷನಲ್ ಆಸ್ಟ್ರೇಲಿಯಾ ಬ್ಯಾಂಕ್, ಬ್ಯಾಂಕರ್ಸ್‌ ಟ್ರಸ್ಟ್‌ ಅಂಡ್ ವೆಸ್ಟ್‌ಪ್ಯಾಕ್‌ ಸೇರಿದಂತೆ ಪ್ರತಿಷ್ಠಿತ ಸಂಸ್ಥೆಗಳ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.