ಜೈಲು (ಪ್ರಾತಿನಿಧಿಕ ಚಿತ್ರ)
ಲಂಡನ್: ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಭಾರತೀಯ ಸಂಜಾತ ಹೃದಯ ಶಸ್ತ್ರಚಿಕಿತ್ಸಕನಿಗೆ ಬ್ರಿಟನ್‌ನಲ್ಲಿ ಆರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಅಮಲ್ ಕೃಷ್ಣ ಬೋಸ್ ಶಿಕ್ಷೆಗೊಳಗಾದ ವೈದ್ಯ.
ಉತ್ತರ ಇಂಗ್ಲೆಂಡ್‌ನ ನ್ಯಾಷನಲ್ ಹೆಲ್ತ್ ಸರ್ವಿಸ್ (ಎನ್‌ಎಸ್‌ಎಸ್) ಆಸ್ಪತ್ರೆಯ ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಈತನ ಮೇಲಿತ್ತು.
ಲಂಕಾಶೈರ್‌ನ ಬ್ಲಾಕ್‌ಪೂಲ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 2017ರಿಂದ 2022ರ ನಡುವೆ ಐವರು ಮಹಿಳಾ ಸಿಬ್ಬಂದಿಗೆ ಲೈಂಗಿಕ ಸಂದೇಶಗಳನ್ನು ಕಳುಹಿಸುವ ಜೊತೆಗೆ ಅವರನ್ನು ಅನುಚಿತವಾಗಿ ಸ್ಪರ್ಶಿಸಿದ್ದ ಎಂಬ ಆರೋಪದಡಿ ಪ್ರಕರಣ ದಾಖಲಾಗಿತ್ತು.
ಕಳೆದ ಜೂನ್‌ನಲ್ಲಿ ನಡೆದ ವಿಚಾರಣೆಯಲ್ಲಿ ಡಾ. ಅಮಲ್, ದೋಷಿ ಎಂಬುದು ಸಾಬೀತಾಗಿದ್ದರಿಂದ ಪ್ರೆಸ್ಟನ್ ಕ್ರೌನ್ ನ್ಯಾಯಾಲಯವು ಸೋಮವಾರ ಶಿಕ್ಷೆ ವಿಧಿಸಿದೆ ಎಂದು ಲಂಕಾಶೈರ್ ಪೊಲೀಸರು ತಿಳಿಸಿದ್ದಾರೆ.
ಲೈಂಗಿಕ ದೌರ್ಜನ್ಯದ ಆರೋಪಗಳನ್ನು ನಿರಾಕರಿಸಿದ್ದ ಬೋಸ್, ‘ಕೆಲಸದ ಸ್ಥಳದಲ್ಲಿ ತಮಾಷೆ ಮಾಡುತ್ತಿದ್ದೆ’ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.