ADVERTISEMENT

'ಭಾರತೀಯ ಮೂಲದ ಸ್ವಾತಿ ಅರೂರ್‌ ಆರೋಗ್ಯ, ಔಷಧ ಕ್ಷೇತ್ರದ ಉದಯೋನ್ಮುಖ ನಾಯಕಿ'

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2022, 16:20 IST
Last Updated 4 ಸೆಪ್ಟೆಂಬರ್ 2022, 16:20 IST
.
.   

ಹ್ಯೂಸ್ಟನ್‌:ಟೆಕ್ಸಾಸ್ ವಿಶ್ವವಿದ್ಯಾಲಯದ ತಳಿ ವಿಜ್ಞಾನ ವಿಭಾಗದ ಉಪಾಧ್ಯಕ್ಷೆ ಮತ್ತು ಎಂ.ಡಿ ಆ್ಯಂಡರ್‌ಸನ್‌ ಕ್ಯಾನ್ಸರ್‌ ಕೇಂದ್ರದ ಪ್ರೊಫೆಸರ್‌, ಭಾರತೀಯ ಮೂಲದ ಡಾ.ಸ್ವಾತಿ ಅರೂರ್‌ ಅವರು 2022ನೇ ಸಾಲಿನಆರೋಗ್ಯ ಮತ್ತು ಔಷಧ ಕ್ಷೇತ್ರದ ಉದಯೋನ್ಮುಖ ಮೇಧಾವಿ ನಾಯಕರಾಗಿ ಆಯ್ಕೆಯಾಗಿದ್ದಾರೆ.

ರಾಷ್ಟ್ರೀಯ ವೈದ್ಯಕೀಯ ಅಕಾಡೆಮಿ (ಎನ್‌ಎಎಂ)ಆರೋಗ್ಯ ಮತ್ತು ಔಷಧ ಕ್ಷೇತ್ರದ ಉದಯೋನ್ಮುಖ ಮೇಧಾವಿ ನಾಯಕರನ್ನು ಗುರುತಿಸಿದೆ.

ಎಂ.ಡಿ ಆ್ಯಂಡರ್‌ಸನ್‌ ಬೋಧಕ ಸಿಬ್ಬಂದಿಯಾಗಿ 2016ರಲ್ಲಿ ಪ್ರತಿಷ್ಠಿತ ಆ್ಯಂಡರ್ ಸನ್ ಸಮೂಹ ಸೇರಿದವರಲ್ಲಿ ಡಾ.ಅರೂರ್‌ ಅವರು ಮೊದಲಿಗರು.

ADVERTISEMENT

1991-1994ರಲ್ಲಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಸ್ವಾತಿ ಅವರು ತಮ್ಮ ಸ್ನಾತಕಪೂರ್ವದ ದಿನಗಳಲ್ಲಿ ಆರೋಗ್ಯ ಸುಧಾರಣೆಯ ಬಗ್ಗೆ ಗಮನ ಕೇಂದ್ರೀಕರಿಸಿದ್ದರು. ಆಗಎಚ್ಐವಿ ಪೀಡಿತ ಮಕ್ಕಳಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಸರ್ಕಾರೇತರ ಸಂಘಟನೆಯನ್ನೂ ಪ್ರಾರಂಭಿಸಿದ್ದರು.

2001ರಲ್ಲಿ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಿಂದ ಮೈಕ್ರೋಬಯಾಲಜಿಯಲ್ಲಿ ಪಿಎಚ್‌.ಡಿ ಪಡೆದರು. ಕನೆಕ್ಟಿಕಟ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಕಾರ್ಯವನ್ನು ಮುಂದುವರಿಸಿದರು. ಅಲ್ಲಿ ಅವರು ಅಪೊಪ್ಟೋಸಿಸ್ ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡರು. ಅವರ ಕೊಡುಗೆ ಮತ್ತು ಅತ್ಯದ್ಭುತ ನಾಯಕತ್ವವನ್ನುರಾಷ್ಟ್ರೀಯ ವೈದ್ಯಕೀಯ ಅಕಾಡೆಮಿ ಗುರುತಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.