ADVERTISEMENT

ಅಮೆರಿಕದ ಟೆಕ್ಸಾಸ್‌ನ ಪ್ರತಿಷ್ಠಿತ TAMESTಗೆ ಭಾರತ ಮೂಲದ ಗಣೇಶ್ ಠಾಕೂರ್ ಅಧ್ಯಕ್ಷ

ಪಿಟಿಐ
Published 24 ಮೇ 2025, 3:02 IST
Last Updated 24 ಮೇ 2025, 3:02 IST
<div class="paragraphs"><p>ಗಣೇಶ್ ಠಾಕೂರ್</p></div>

ಗಣೇಶ್ ಠಾಕೂರ್

   

ಹೂಸ್ಟನ್: ಅಮೆರಿಕದ ಪ್ರತಿಷ್ಠಿತ ‘ಟೆಕ್ಸಾಸ್ ಅಕಾಡೆಮಿ ಆಫ್ ಮೆಡಿಸಿನ್, ಎಂಜಿನಿಯರಿಂಗ್, ಸೈನ್ಸ್ ಆ್ಯಂಡ್ ಟೆಕ್ನಾಲಜಿ’ಯ (TAMEST) ಅಧ್ಯಕ್ಷರಾಗಿ ಭಾರತ ಮೂಲದ ಪ್ರೊ. ಗಣೇಶ್ ಠಾಕೂರ್ ಅವರು ನೇಮಕಗೊಂಡಿದ್ದಾರೆ.

ಸದ್ಯ ಟೆಕ್ಸಾಸ್ ರಾಜ್ಯದ ಹೂಸ್ಟನ್‌ನ ಯುನಿವರ್ಸಿಟಿ ಆಫ್ ಹೂಸ್ಟನ್‌ನಲ್ಲಿ (UH) ಗಣೇಶ್ ಠಾಕೂರ್ ಅವರು ಪೆಟ್ರೋಲಿಯಂ ಸೈನ್ಸ್‌ನ ಪ್ರಾಧ್ಯಾಪಕರಾಗಿದ್ದಾರೆ.

ADVERTISEMENT

TAMESTಯು ಅಮೆರಿಕದಲ್ಲಿನ ಅತ್ಯುತ್ತಮ ಪ್ರಾಧ್ಯಾಪಕರು, ಸಂಶೋಧಕರು, ವೈದ್ಯರು, ತಂತ್ರಜ್ಞರು ಹಾಗೂ ನೊಬೆಲ್ ಪುರಸ್ಕೃತರನ್ನು ಒಳಗೊಂಡಿರುವ ಉನ್ನತ ಸಂಸ್ಥೆಯಾಗಿದೆ.

TAMEST ಅಮೆರಿಕದ ನ್ಯಾಷನಲ್ ಅಕಾಡೆಮಿಯ 350 ಸದಸ್ಯರನ್ನು ಹಾಗೂ 8 ನೊಬೆಲ್ ಪುರಸ್ಕೃತರನ್ನು ಸದಸ್ಯರನ್ನಾಗಿ ಹೊಂದಿದೆ.

ಎರಡು ವರ್ಷಗಳ ಅವಧಿಗೆ ಟೆಕ್ಸಾಸ್ ಅಕಾಡೆಮಿಯ ಅಧ್ಯಕ್ಷರಾಗಿರುವ ಗಣೇಶ್ ಠಾಕೂರ್ 2027 ಜೂನ್‌ನಲ್ಲಿ ನಿರ್ಗಮಿಸುತ್ತಾರೆ.

2026ರ ಜನವರಿಯಲ್ಲಿ ಸ್ಯಾನ್‌ ಅಂಟೊನಿಯೊದಲ್ಲಿ ಗಣೇಶ್ ಅವರ ನೇತೃತ್ವದಲ್ಲಿ ಹವಾಮಾನ ಬದಲಾವಣೆ ಬಗ್ಗೆ ಜಾಗತಿಕ ಶೃಂಗಸಭೆ ನಡೆಯಲಿದೆ. ಗಣೇಶ್ ಠಾಕೂರ್ ಅವರು ಗುಜರಾತ್ ಮೂಲದವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.