ADVERTISEMENT

ಜನಾಂಗೀಯ ನಿಂದನೆ ವಿಡಿಯೊಗೆ ಕ್ಷಮೆ ಕೋರಿದ ಭಾರತೀಯರು

ಪಿಟಿಐ
Published 4 ಆಗಸ್ಟ್ 2019, 20:00 IST
Last Updated 4 ಆಗಸ್ಟ್ 2019, 20:00 IST
   

ಸಿಂಗಪುರ(ಪಿಟಿಐ): ಇ–ಪಾವತಿ ಜಾಹೀರಾತನ್ನು ಟೀಕಿಸುವ ಭರದಲ್ಲಿ ಯೂಟ್ಯೂಬ್‌ನಲ್ಲಿಜನಾಂಗೀಯ ನಿಂದನೆಗೀಡಾಗುವಂತಹ ವಿಡಿಯೊ ಹಾಕಿದ್ದ ಇಬ್ಬರು ಭಾರತೀಯ ಸಂಜಾತರುಕ್ಷಮೆ ಕೋರಿದ್ದಾರೆ.

ವಿಡಿಯೊದಲ್ಲಿನ ವಿಷಯ, ಕೀಳಾದ ನಡವಳಿಕೆ, ಅಂಗಸನ್ನೆಯ ಬಗ್ಗೆ ನಾವು ಕ್ಷಮೆ ಯಾಚಿಸುತ್ತೇವೆ ಎಂದು ಪ್ರೀತಿ ನಾಯರ್‌ ಹಾಗೂ ಆಕೆಯ ಸಹೋದರ ಸುಭಾಶ್‌ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ‘ಜನರ ಮನಸ್ಸನ್ನು ನೋಯಿಸಿದ್ದೇವೆ. ಇದಕ್ಕಾಗಿ ಕ್ಷಮೆ ಯಾಚಿಸುತ್ತೇವೆ. ವಿಡಿಯೊ ಮುಖಾಂತರ ಹೇಳಬೇಕಾಗಿದ್ದ ವಿಷಯವನ್ನು ಹೇಳುವಾಗ ಎಡವಿದ್ದೇವೆ. ಮುಂದೆ ಇಂತಹ ವಿಡಿಯೊ ಮಾಡುವ ಸಂದರ್ಭದಲ್ಲಿ ಜಾಗರೂಕರಾಗಿರುತ್ತೇವೆ’ ಎಂದು ಬರೆದುಕೊಂಡಿದ್ದಾರೆ.

ಸಿಂಗಪುರದಲ್ಲಿ ಹೆಚ್ಚಾಗಿ ಬಳಸುವ ನೆಟ್‌ವರ್ಕ್‌ ಫಾರ್‌ ಎಲೆಕ್ಟ್ರಾನಿಕ್‌ ಟ್ರಾನ್ಸ್‌ಫರ್‌(ಎನ್‌ಇಟಿಎಸ್‌)ಇ–ಪಾವತಿಯ ಜಾಹೀರಾತಿನಲ್ಲಿ ಸ್ಥಳೀಯ ನಟ ಡೆನಿಸ್‌ ಚ್ಯೂ ನಟಿಸಿದ್ದರು. ಇದರಲ್ಲಿ ಭಾರತೀಯ ಪ್ರಜೆಯ ಪಾತ್ರ ನಿರ್ವಹಿಸಿದ್ದಡೆನಿಸ್‌ ಮೈ ಬಣ್ಣವನ್ನು ಕಪ್ಪು ಮಾಡಲಾಗಿತ್ತು. ಇದನ್ನು ವಿರೋಧಿಸಿ ಪ್ರೀತಿ ಹಾಗೂ ಸುಭಾಶ್‌ ವೀಡಿಯೋ ಮಾಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.