ADVERTISEMENT

ಇಂಡೊನೇಷ್ಯಾ: ಕೋವಿಡ್‌ ಲಸಿಕೆಗೆ 'ಹಲಾಲ್'‌ ಪ್ರಮಾಣೀಕರಣ

ಏಜೆನ್ಸೀಸ್
Published 8 ಡಿಸೆಂಬರ್ 2020, 9:35 IST
Last Updated 8 ಡಿಸೆಂಬರ್ 2020, 9:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಕಾರ್ತಾ: ಇಂಡೊನೇಷ್ಯಾದ ಉನ್ನತ ಮುಸ್ಲಿಂ ಧಾರ್ಮಿಕ ಸಂಸ್ಥೆಯು ಚೀನಾ ಮೂಲದ ಸೈನೋವಾಕ್‌ ಬಯೋಟೆಕ್‌ ಅಭಿವೃದ್ಧಿಪಡಿಸಿದ ಪ್ರಾಯೋಗಿಕ ಕೋವಿಡ್‌ ಲಸಿಕೆಗೆ ಹಲಾಲ್‌ ಪ್ರಮಾಣೀಕರಣವನ್ನು ನೀಡುವ ಸಾಧ್ಯತೆಯಿದೆ.

ಇಂಡೊನೇಷ್ಯಾದಲ್ಲಿ ಲಸಿಕೆ ಬಳಕೆಗೆ ಅನುಮೋದನೆ ಪಡೆಯಬೇಕಾದರೆ ಈ ಪ್ರಮಾಣೀಕರಣ ಅಗತ್ಯ.

ಇಂಡೋನೇಷ್ಯಾದ ಉಲೆಮಾ ಕೌನ್ಸಿಲ್, ಹಲಾಲ್ ಉತ್ಪನ್ನ ಖಾತರಿ ಸಂಸ್ಥೆಯು ಫತ್ವಾ ಮತ್ತು ಹಲಾಲ್ ಪ್ರಮಾಣೀಕರಣಕ್ಕಾಗಿ ಬೇಕಾದ ಎಲ್ಲಾ ದಾಖಲೆಗಳನ್ನು ಸಿದ್ದಪಡಿಸಿ, ಸಮಿತಿಗೆ ಸಲ್ಲಿಸಿದೆ ಎಂದು ಮಾನವ ಅಭಿವೃದ್ಧಿ ಮತ್ತು ಸಂಸ್ಕೃತಿ ಸಚಿವ ಮುಹಾಜಿರ್ ಎಫೆಂಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಸೈನೋವಾಕ್‌ ಬಯೋಟೆಕ್‌ ಅಭಿವೃದ್ಧಿಪಡಿಸಿದ ಪ್ರಾಯೋಗಿಕ ಕೋವಿಡ್‌ ಲಸಿಕೆಯ 10 ಲಕ್ಷ ಡೋಸ್‌ ಭಾನುವಾರಇಂಡೋನೇಷ್ಯಾಗೆ ಬಂದಿಳಿದಿದೆ. ಈವರೆಗೆ ಸರ್ಕಾರ ಲಸಿಕೆ ವಿತರಣೆ ದಿನಾಂಕವನ್ನು ನಿಗದಿಪಡಿಸಿಲ್ಲ.

‘ಮೂರನೇ ಹಂತದ ಕ್ಲಿನಿಕಲ್‌ ಪ್ರಯೋಗದಲ್ಲಿ ಸಫಲತೆ ಸಿಕ್ಕ ಬಳಿಕವೇ ಪ್ರಜೆಗಳಿಗೆ ಪ್ರಾಯೋಗಿಕ ಲಸಿಕೆಯನ್ನು ವಿತರಿಸಲಾಗುವುದು. ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸುಗಳ ಅಡಿಯಲ್ಲಿ ಮೂರು ಕ್ಲಿನಿಕಲ್‌ ಟ್ರಯಲ್‌ಗಳಲ್ಲಿ ಸುರಕ್ಷಿತವೆಂದು ಸಾಬೀತಾದ ಲಸಿಕೆಯನ್ನು ಮಾತ್ರ ಜನರಿಗೆ ನೀಡಲಾಗುತ್ತದೆ’ ಎಂದು ಆರೋಗ್ಯ ಸಚಿವ ಟೆರಾವಾನ್ ಅಗಸ್ ಪುತ್ರಾಂಟೊ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.