ದಾಳಿ ನಡೆದ ಸ್ಥಳದಲ್ಲಿ ಸೇನೆ ನಿಯೋಜನೆ
– ರಾಯಿಟರ್ಸ್ ಚಿತ್ರ
ದುಬೈ: ಇಸ್ರೇಲ್ ರಾಜಧಾನಿ ಟೆಲ್ ಅವಿವ್ ಮೇಲೆ ಶುಕ್ರವಾರ ಮುಂಜಾನೆ ನಡೆದ ದಾಳಿಯ ಹೊಣೆಯನ್ನು ಇರಾನ್ ಬೆಂಬಲಿತ ಯೆಮನ್ ಹುತಿ ಬಂಡುಕೋರರು ಹೊತ್ತುಕೊಂಡಿದ್ದಾರೆ.
ದಾಳಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಹುತಿ ಬಂಡುಕೋರರು, ‘ಆಕ್ರಮಿತ ಪ್ಯಾಲೆಸ್ಟೀನ್‌ನ ಜಾಫ (ಟೆಲಿ ಅವಿವ್‌ನ ಭಾಗ) ಪ್ರದೇಶದ ಮೇಲೆ ದಾಳಿ ನಡೆಸಲಾಗಿದೆ’ ಎಂದು ಹೇಳಿದೆ.
ದಾಳಿ ಸಂಬಂಧ ತನಿಖೆ ಪ್ರಾರಂಭಿಸಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ. ಅಲ್ಲದೆ ವೈಮಾನಿಕ ಗುರಿಯನ್ನು ತಡೆಯಲು ದೇಶದ ವಾಯು ರಕ್ಷಣಾ ವ್ಯವಸ್ಥೆಗಳನ್ನು ಏಕೆ ಸಕ್ರಿಯಗೊಳಿಸಲಾಗಿಲ್ಲ ಎಂಬುವುದರ ಬಗ್ಗೆಯೂ ತನಿಖೆ ನಡೆಯಲಿದೆ ಎಂದು ಸೇನೆ ತಿಳಿಸಿದೆ.
ದಾಳಿ ಬಳಿಯ ವಾಯು ಗಸ್ತು ಹೆಚ್ಚಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.